Saturday, June 6, 2026
Homeಆರಾಧನಾಮಹಾಕುಂಭದಲ್ಲಿ ಬಹುಭಾಷಾ ನಟ ಪ್ರಕಾಶ್‌ ರಾಜ್‌ ಪವಿತ್ರ ಸ್ನಾನ: ನಕಲಿ ಫೋಟೋ ವೈರಲ್‌ ಮಾಡಿದವರ ವಿರುದ್ದ ಪೊಲೀಸರಿಗೆ...

ಮಹಾಕುಂಭದಲ್ಲಿ ಬಹುಭಾಷಾ ನಟ ಪ್ರಕಾಶ್‌ ರಾಜ್‌ ಪವಿತ್ರ ಸ್ನಾನ: ನಕಲಿ ಫೋಟೋ ವೈರಲ್‌ ಮಾಡಿದವರ ವಿರುದ್ದ ಪೊಲೀಸರಿಗೆ ದೂರು

- Advertisement -
- Advertisement -

ಬೆಂಗಳೂರು: ಬಹುಭಾಷಾ ನಟ ಪ್ರಕಾಶ್‌ ರಾಜ್ ಉತ್ತರ ಪ್ರದೇಶದ ಪ್ರಯಾಗರಾಜ್‌ನ ಮಹಾಕುಂಭ ಮೇಳದಲ್ಲಿ ಪವಿತ್ರ ಸ್ನಾನ ಮಾಡುತ್ತಿರುವ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲಾಗಿದ್ದು, ಈಗ ಬಹಳಷ್ಟು ಸದ್ದು ಮಾಡುತ್ತಿದೆ.

ನಟ ಮಹಾಕುಂಭಕ್ಕೆ ಭೇಟಿ ನೀಡಿ ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿರುವ ಎಐನಿಂದ ರಚಿತವಾದ ಫೊಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕೆಲವರು ಇದನ್ನೇ ಸತ್ಯವೆಂದು ನಂಬಿ ಕಮೆಂಟ್‌ ಮಾಡುತ್ತಿದ್ದಾರೆ.

ಇನ್ನು ಈ ಬಗ್ಗೆ ಪ್ರಕಾಶ್‌ ರಾಜ್‌ ಅವರು ಸ್ವತಃ ವೈರಲ್‌ ಆದ ಫೋಟೋವನ್ನು ಹಂಚಿಕೊಂಡು, ಸುಳ್ಳು ಸುದ್ದಿ “ಸುಳ್ಳ ರಾಜ” ನ ಹೇಡಿಗಳ ಸೈನ್ಯಕ್ಕೆ .. ಅವರ ಪವಿತ್ರ ಪೂಜೆಯಲ್ಲೂ ಸುಳ್ಳು ಸುದ್ದಿ ಹಬ್ಬಿಸಿ ಹೊಲಸು ಮಾಡುವುದೇ ಕೆಲಸ .. ಪೊಲೀಸ್ ಕಂಪ್ಲೈಟ್ ದಾಖಲಾಗಿದೆ .. ಕೋರ್ಟಿನ ಕಟಕಟೆಯಲ್ಲಿ ಏನು ಮಾಡುತ್ತಾರೋ ನೋಡೋಣ ಎಂದು ತಮ್ಮ ‘ಎಕ್ಸ್‌ʼ ಖಾತೆಯಲ್ಲಿ ಬರೆದು ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. 

- Advertisement -

Latest News

error: Content is protected !!