Wednesday, June 3, 2026
Homeಕರಾವಳಿಸುಳ್ಯ: ಆನೆಗಳ ಮಧ್ಯೆ ಕಾದಾಟ, ಒಂದು ಕಾಡಾನೆ ಸಾವು

ಸುಳ್ಯ: ಆನೆಗಳ ಮಧ್ಯೆ ಕಾದಾಟ, ಒಂದು ಕಾಡಾನೆ ಸಾವು

- Advertisement -
- Advertisement -

ಸುಳ್ಯ: ಆನೆಗಳ ಮಧ್ಯೆ ಕಾದಾಟ, ಒಂದು ಕಾಡಾನೆ ಸಾವನ್ನಪ್ಪಿರುವ ಘಟನೆ ಸುಳ್ಯ ತಾಲೂಕಿನ ಮಂಡೆಕೋಲು ಗ್ರಾಮದ ಎರ್ಕಲ್ಪಾಡಿಯಲ್ಲಿ ಎಂಬಲ್ಲಿ ನಡೆದಿದೆ. ಮಂಡೆಕೋಲು ರಿಸರ್ವ್‌ ಫಾರೆಸ್ಟ್ ನಲ್ಲಿ ಸ್ಥಳೀಯರಿಗೆ ಕಾಡಾನೆ ಮೃತದೇಹ ಕಂಡುಬಂದಿದ್ದು, ಅವರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ.
ಮೃತ ಆನೆ ಗಂಡಾಗಿದ್ದು, ಬೇರೆ ಆನೆಗಳ ಜೊತೆ ಕಾದಾಟದ ವೇಳೆ ಗಂಭೀರವಾಗಿ ಗಾಯಗೊಂಡಿದ್ದು, ಬಳಿಕ ತೀವ್ರ ರಕ್ತ ಸ್ರಾವದಿಂದ ಸಾವನಪ್ಪಿರುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಆನೆಯ ದೇಹದಲ್ಲಿ ಗಾಯದ ಗುರುತುಗಳು ಕಂಡು ಬಂದಿದೆ. ಅರಣ್ಯ ಭಾಗದ ಬೇರೆ ಕಡೆಯಲ್ಲಿ ಕಾದಾಟ ನಡೆದಿದ್ದು, ಇಲ್ಲಿ ಬಂದು ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ. ಘಟನ ಸ್ಥಳಕ್ಕೆ ಸುಳ್ಯ ಎಸಿಎಫ್‌ ಪ್ರವೀಣ್‌ ಕುಮಾರ್‌ ಶೆಟ್ಟಿ, ವಲಯ ಅರಣ್ಯಾಧಿಕಾರಿ ಮಂಜುನಾಥ್‌ ಎನ್‌. ಸೇರಿದಂತೆ ಅರಣ್ಯ ಇಲಾಖೆ ಅಧಿಕಾರಿಗಳು, ಸಿಬಂದಿ ಭೇಟಿ ನೀಡಿದ್ದಾರೆ. ರಾತ್ರಿ ವೇಳೆಗೆ ಸುಳ್ಯ ಪಶುವೈದ್ಯಾಧಿಕಾರಿ ಡಾ| ನಿತಿನ್‌ ಪ್ರಭು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ.

- Advertisement -

Latest News

error: Content is protected !!