- Advertisement -
![]()
- Advertisement -
ಬೆಂಗಳೂರು: ಬಿಗ್ ಬಾಸ್ ಸೀಸನ್ 11ರ ಗ್ರ್ಯಾಂಡ್ ಫಿನಾಲೆ ನಡೆಯುತ್ತಿದ್ದು ಇಂದು ಬಿಗ್ ಬಾಸ್ ಮನೆಯಿಂದ ಉಗ್ರಂ ಮಂಜು ಅವರು ಹೊರಗಡೆ ಬಂದಿದ್ದಾರೆ.
ಬಿಗ್ ಬಾಸ್ ಸೀಸನ್ 11 ರ ಪ್ರಬಲ ಸ್ಪರ್ಧಿಯೆಂದು ಉಗ್ರಂ ಮಂಜು ಅವರು ಗುರುತಿಸಿಕೊಂಡಿದ್ದರು. ಆದರೆ ಇದೀಗ ಅವರು ಕೊನೆ ಕ್ಷಣದಲ್ಲಿ ಬಿಗ್ ಬಾಸ್ ಮನೆಯಿಂದ ಹೊರ ಬಂದಿದ್ದಾರೆ. ಆ ಮೂಲಕ ಕಪ್ ಗೆಲ್ಲುವ ಅವರ ಕನಸು ಕನಸಾಗಿಯೇ ಉಳಿದಿದೆ.
ಇನ್ನು ಬಿಗ್ ಬಾಸ್ ಜರ್ನಿ ಕೊನೆಯಾಗಿದ್ದರ ಬಗ್ಗೆ ಮಾತನಾಡಿದ ಉಗ್ರಂ ಮಂಜು ಕಪ್ ಗೆಲ್ಲೋದು ನನ್ನ ತಾಯಿಯ ಕನಸಾಗಿತ್ತು.ಆದರೆ ಅದು ಸಾಧ್ಯವಾಗಿಲ್ಲ. ಆದರೆ ಈ ಶೋ ನನ್ನ ಬದುಕನ್ನು ಬದಲಾಯಿಸಿದೆ. ಅದಕ್ಕೆ ನನಗೆ ಖುಷಿಯಿದೆ ಎಂದು ಉಗ್ರಂ ಮಂಜು ಹೇಳಿದ್ದಾರೆ.
- Advertisement -


