Wednesday, June 3, 2026
Homeಕರಾವಳಿಉಡುಪಿಉಡುಪಿ: ಹೋಮ್ ಸ್ಟೇ ಮ್ಯಾನೇಜರ್ ಗೆ ಚಾಕುವಿನಿಂದ ಇರಿತ

ಉಡುಪಿ: ಹೋಮ್ ಸ್ಟೇ ಮ್ಯಾನೇಜರ್ ಗೆ ಚಾಕುವಿನಿಂದ ಇರಿತ

- Advertisement -
- Advertisement -

ಉಡುಪಿ: ಹೋಮ್ ಸ್ಟೇ ಮ್ಯಾನೇಜರ್ ಗೆ ಚಾಕುವಿನಿಂದ ಇರಿದ ಘಟನೆ  ಪಡುತೋನ್ಸೆ ಗ್ರಾಮದ ಗುಜ್ಜರಬೆಟ್ಟು ಭೈರವಿ ಹೋಮ್‌ಸ್ಟೇನಲ್ಲಿ ನಡೆದಿದೆ. ಗುರುರಾಜ್‌ ಚೂರಿ ಇರಿತಕ್ಕೆ ಒಳಗಾದ ಮ್ಯಾನೇಜರ್. ಶ್ರೀಕಾಂತ್ ಚೂರಿಯಿಂದ ಇರಿದಾತ.  ಕೆಲಸದ ವಿಚಾರವಾಗಿ ಉಂಟಾದ ವಾಕ್ ಸಮರ ಚೂರಿ ಇರಿಯುವ ಹಂತಕ್ಕೆ ತಲುಪಿದೆ ಎನ್ನಲಾಗಿದೆ.

ಶ್ರೀಕಾಂತ್ ಹಾಗೂ ಹೋಮ್‌ಸ್ಟೇನ ಮ್ಯಾನೇಜರ್ ಗುರುರಾಜ್‌ ಮಧ್ಯೆ ಕೆಲಸದ ವಿಚಾರಕ್ಕೆ ಜಗಳ ನಡೆದಿದೆ. ಕೊನೆಗೆ ಇದು ತಾರಕ್ಕೇರಿ ಅಡುಗೆಮನೆಯಲ್ಲಿದ್ದ ಚಾಕುವಿನಿಂದ ಗುರುರಾಜ್‌ನ ಹೊಟ್ಟೆಯನ್ನು ಇರಿದಿದ್ದಾನೆ.

ಈ ಘಟನೆಯ ಕುರಿತು ಮಾರುತಿ ಎಂಬಾತ ಮಲ್ಪೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪೊಲೀಸರು  ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

- Advertisement -

Latest News

error: Content is protected !!