- Advertisement -
![]()
- Advertisement -
ಉಡುಪಿ: 15 ವರ್ಷಗಳಿಂದ ತಲೆಮರೆಸಿಕೊಂಡಿದ್ದ ವಾರೆಂಟ್ ಆರೋಪಿಯನ್ನು ಪೊಲೀಸರು ಬಂಧಿಸಿದ ಘಟನೆ ಮಣಿಪಾಲದಲ್ಲಿ ನಡೆದಿದೆ. ಉಡುಪಿಯ ಬಡಗಬೆಟ್ಟು ನಿವಾಸಿ ಬಾಲಾಜಿ ಬಂಧಿತ ಆರೋಪಿ.
ಕಳೆದ 15 ವರ್ಷಗಳಿಂದ ತಲೆ ಮರೆಸಿಕೊಂಡಿದ್ದವನನ್ನು ಬೆಂಗಳೂರಿನ ಹರಳೂರು ಬಸ್ಸು ನಿಲ್ದಾಣ ಬಳಿ ಮಣಿಪಾಲ ಪೊಲೀಸ್ ನಿರೀಕ್ಷಕ ದೇವರಾಜ್ ಟಿ.ವಿ, ಪಿಎಸ್ಐ ಅನಿಲ್ ಕುಮಾರ್, ಪಿಎಸ್ಐ ಅಕ್ಷಯ ಕುಮಾರಿ, ಹೆಚ್.ಸಿ ಥಾಮ್ಸನ್, ಪಿಸಿ ರವಿರಾಜ್ ಅವರ ತಂಡ ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.
- Advertisement -


