Wednesday, June 3, 2026
Homeಉತ್ತರ ಕನ್ನಡಉತ್ತರ ಕನ್ನಡ :ತರಕಾರಿ ತುಂಬಿದ ಲಾರಿ ಅಪಘಾತ : 10 ಮಂದಿ ಸಾವು, 15 ಮಂದಿಗೆ...

ಉತ್ತರ ಕನ್ನಡ :ತರಕಾರಿ ತುಂಬಿದ ಲಾರಿ ಅಪಘಾತ : 10 ಮಂದಿ ಸಾವು, 15 ಮಂದಿಗೆ ಗಾಯ

- Advertisement -
- Advertisement -

ಉತ್ತರ ಕನ್ನಡ : ತರಕಾರಿ ತುಂಬಿದ ಲಾರಿ ಅಪಘಾತವಾಗಿ 10 ಮಂದಿ ಸಾವನ್ನಪ್ಪಿರುವ ಘಟನೆ ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಗುಳ್ಳಾಪುರ ಘಟ್ಟ ಭಾಗದಲ್ಲಿ ನಡೆದಿದೆ. ಘಟನೆಯ್ಲಿ 15 ಮಂದಿಗೆ ಗಾಯಗಳಾಗಿವೆ.

ಸವನೂರಿನಂದ ಕುಮುಟಕ್ಕೆ ತರಕಾರಿ ತುಂಬಿದ ಲಾರಿಯಲ್ಲಿ 25ಜನ ಪ್ರಯಾಣಿಸುತ್ತಿದ್ದರು.ಲಾರಿ ಚಾಲಕನ ನಿಯಂತ್ರಣ ತಪ್ಪಿ ಪಾಲಿಯಾಗಿದ್ದು ಹಲವು ಸಾವು ನೋವು ಸಂಭವಿಸಿದೆ. ಮೃತರು ಹಾವೇರಿ ಜಿಲ್ಲೆ ಸವಣೂರು ಮೂಲದವರೆಂಬ ಮಾಹಿತಿ ದೊರೆತಿದೆ.

ನಸುಕಿನ‌ ಜಾವ ರಸ್ತೆಯಲ್ಲಿ ಮಂಜು ಮುಸುಕಿದ್ದರಿಂದ ಲಾರಿ ಪಲ್ಟಿಯಾಗಿದೆ. 15ಕ್ಕೂ ಹೆಚ್ಚು ಜನರಿಗೆ ಗಂಭೀರ ಗಾಯಗಳಾಗಿದ್ದು, ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.​ ಘಟನಾ ಸ್ಥಳಕ್ಕೆ ಯಲ್ಲಾಪುರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

- Advertisement -

Latest News

error: Content is protected !!