Saturday, June 6, 2026
Homeಮನರಂಜನೆಮತ್ತೆ ಪ್ರಸಾರ ಆರಂಭಿಸಲಿದೆ ವೀಕ್ಷಕರ ನೆಚ್ಚಿನ ಕಾರ್ಯಕ್ರಮ ಸರಿಗಮಪ

ಮತ್ತೆ ಪ್ರಸಾರ ಆರಂಭಿಸಲಿದೆ ವೀಕ್ಷಕರ ನೆಚ್ಚಿನ ಕಾರ್ಯಕ್ರಮ ಸರಿಗಮಪ

- Advertisement -
- Advertisement -

ಬೆಂಗಳೂರು : ಕನ್ನಡ ಕಿರುತೆರೆಯಲ್ಲಿ ಅಸಂಖ್ಯಾತ ಅಭಿಮಾನಿಗಳ ದಿಲ್ ಕದ್ದ ರಿಯಾಲಿಟಿ ಶೋಗಳಲ್ಲಿ ಒಂದು ಸರಿಗಮಪ ಕಾರ್ಯಕ್ರಮ. ಲಾಕ್ ಡೌನ್ ನಿಂದಾಗ ಸುಮಾರು ಮೂರು ತಿಂಗಳ ಕಾಲ ಈ ಕಾರ್ಯಕ್ರಮ ಸ್ಥಗಿತಗೊಂಡಿತ್ತು, ಇದೀಗ ಸರಿಗಮಪ ಕಾರ್ಯಕ್ರಮಕ್ಕೆ ಮರು ಚಾಲನೆ ಸಿಕ್ಕಿದೆ.

3 ತಿಂಗಳು ಸ್ಥಗಿತಗೊಂಡಿದ್ದ ಈ ಸಂಗೀತ ಕಾರ್ಯಕ್ರಮವು ಮತ್ತೆ ಪ್ರಾರಂಭವಾಗುತ್ತಿರುವುದು ಎಲ್ಲ ವೀಕ್ಷಕರ ಮೊಗದಲ್ಲಿ ಸಂತೋಷ ತಂದಿದೆ. ವೇದಿಕೆಯ ಮಹಾಗುರುಗಳಾದ ನಾದಬ್ರಹ್ಮ ಡಾ.ಹಂಸಲೇಖ ಅವರ ಅಮೃತ ಹಸ್ತದಿಂದ ಸರಿಗಮಪದ ರಾಗದ ಬೀಗ ತೆಗೆಯುವುದರ ಮೂಲಕ ಕಾರ್ಯಕ್ರಮಕ್ಕೆ ಮರು ಚಾಲನೆ ನೀಡಿದ್ದಾರೆ.. ಅವರ ಜೊತೆಯಲ್ಲಿ ಗಾಯಕರಾದ ವಿಜಯ್ ಪ್ರಕಾಶ್, ರಾಜೇಶ್ ಕೃಷ್ಣನ್, ಸಂಗೀತ ನಿರ್ದೇಶಕ ಅರ್ಜುನ್ ಜನ್ಯಾ ಹಾಗೂ ನಿರೂಪಕಿ ಅನುಶ್ರೀ ಉಪಸ್ಥಿತರಿದ್ದರು.

ಕನ್ನಡ ಕಿರುತೆರೆಯ ಮಹತ್ತರವಾದ ಸಂಗೀತ ಕಾರ್ಯಕ್ರಮ ಸರಿಗಮಪ ಯಶಸ್ವಿಯಾಗಿ 16 ಆವೃತ್ತಿಗಳನ್ನು ಪೂರೈಸಿ 17ನೇ ಆವೃತ್ತಿ ನಡೆಯುತ್ತಿತ್ತು. ಲಾಕ್ ಡೌನ್ ಈ ಜನಪ್ರಿಯ ಕಾರ್ಯಕ್ರಮದ ಪ್ರಸಾರಕ್ಕೆ ಅಡ್ಡಿಯಾಗಿತ್ತು. ಆದರೆ ಇದೀಗ ಮತ್ತೆ ಕಾರ್ಯಕ್ರಮ ಮತ್ತೆ ಆರಂಭವಾಗಿರೋದು ಎಲ್ಲರಿಗೂ ಖುಷಿ ತಂದಿದೆ.

ಸರಿಗಮಪ ಲಾಕ್ ಡೌನ್ ನಿರ್ಬಂಧದ ನಂತರ 17 ಸ್ಪರ್ಧಿಗಳ ಭಾಗವಹಿಸುವಿಕೆಯೊಂದಿಗೆ ಮತ್ತೆ ಪ್ರಾರಂಭವಾಗುತ್ತಿರುವುದು ಈ ಕಾರ್ಯಕ್ರಮದ ಅಭಿಮಾನಿಗಳಿಗೆ ಸಂತಸ ತಂದಿದೆ. ಭಾನುವಾರ ಸಂಜೆ 7.30ಕ್ಕೆ ಲಾಕ್ ಡೌನ್ ಬಳಿಕದ ಮೊದಲ ಸಂಚಿಕೆ ಪ್ರಸಾರವಾಗಲಿದೆ.

- Advertisement -

Latest News

error: Content is protected !!