Wednesday, June 3, 2026
Homeಕರಾವಳಿಪುತ್ತೂರು; ಬೈಕ್‌ ಮತ್ತು ಕೆಎಸ್ ಆರ್ ಟಿ ಸಿ ಬಸ್‌ ನಡುವೆ ಅಪಘಾತ; ವಿದ್ಯಾರ್ಥಿಗಳಿಬ್ಬರಿಗೆ ಗಂಭೀರ...

ಪುತ್ತೂರು; ಬೈಕ್‌ ಮತ್ತು ಕೆಎಸ್ ಆರ್ ಟಿ ಸಿ ಬಸ್‌ ನಡುವೆ ಅಪಘಾತ; ವಿದ್ಯಾರ್ಥಿಗಳಿಬ್ಬರಿಗೆ ಗಂಭೀರ ಗಾಯ

- Advertisement -
- Advertisement -

ಪುತ್ತೂರು; ಬೈಕ್‌ ಮತ್ತು ಕೆಎಸ್ ಆರ್ ಟಿ ಸಿ ಬಸ್‌ ನಡುವೆ ಅಪಘಾತ ಸಂಭವಿಸಿ ವಿದ್ಯಾರ್ಥಿಗಳಿಬ್ಬರಿಗೆ ಗಂಭೀರ ಗಾಯಗಳಾಗಿರುವ ಘಟನೆ ಉಪ್ಪಿನಂಗಡಿ ಸಮೀಪದ ದಾರಂದಕುಕ್ಕು ಕೊಲ್ಯದಲ್ಲಿ ಜ.08 ರಂದು ಬೆಳಿಗ್ಗೆ ನಡೆದಿದೆ. 

ಬೆಳ್ಳಿಪ್ಪಾಡಿ ನಿವಾಸಿಗಳಾಗಿರುವ ಸುಳ್ಯ ಕೆವಿಜಿ ಪಾಲಿಟೆಕ್ನಿಕ್‌ ವಿದ್ಯಾರ್ಥಿ ಬೈಕ್‌ ಸವಾರ ನಿಶಾಂತ್‌ ಮತ್ತು ಹಿಂಬದಿ ಸವಾರ ಶ್ರೀ ರಾಮಕೃಷ್ಣ ಪ್ರೌಢಶಾಲೆಯ ವಿದ್ಯಾರ್ಥಿ ಕಾರ್ತಿಕ್‌ ಎಂಬುವವರು ಗಾಯಗೊಂಡ ವಿದ್ಯಾರ್ಥಿಗಳು.

ಬೈಕ್‌ನಲ್ಲಿ ಪೂತ್ತೂರಿಗೆ ಬರುತ್ತಿದ್ದ ಸಂದರ್ಭದಲ್ಲಿ ವಿರುದ್ಧ ದಿಕ್ಕಿನ ಕಡೆಯಿಂದ ಬಂದ ಕೆಎಸ್‌ಆರ್‌ಟಿಸಿ ಬಸ್‌ ನಡುವೆ ಡಿಕ್ಕಿ ಸಂಭವಿಸಿದ್ದು, ಗಾಯಾಳುಗಳನ್ನು ಪುತ್ತೂರು ಮಹಾವೀರ ಆಸ್ಪತ್ರೆಗೆ ದಾಖಲಿಸಲಾಗಿದೆ ಎನ್ನಲಾಗಿದೆ.

- Advertisement -

Latest News

error: Content is protected !!