Sunday, June 7, 2026
Homeಕರಾವಳಿಮಂಗಳೂರುಮಂಗಳೂರಿನ ಜೈಲಿಗೆ ಹೊರಗಿನಿಂದ ಮೊಬೈಲ್ ಎಸೆಯಲು ಯತ್ನಿಸುತ್ತಿದ್ದಾತ ಅಂದರ್

ಮಂಗಳೂರಿನ ಜೈಲಿಗೆ ಹೊರಗಿನಿಂದ ಮೊಬೈಲ್ ಎಸೆಯಲು ಯತ್ನಿಸುತ್ತಿದ್ದಾತ ಅಂದರ್

- Advertisement -
- Advertisement -

ಮಂಗಳೂರು; ಜೈಲಿಗೆ ಹೊರಗಿನಿಂದ ಮೊಬೈಲ್ ಎಸೆಯಲು ಯತ್ನಿಸುತ್ತಿದ್ದಾತನನ್ನು ಪೊಲೀಸರು ಬಂಧಿಸಿರುವ ಘಟನೆ  ಮಂಗಳೂರಿನಲ್ಲಿ ನಡೆದಿದೆ.ಪಂಜಿಮೊಗರಿನ ಪ್ರಜ್ವಲ್ (21) ಬಂಧಿತ ಆರೋಪಿ.

ಪ್ರಜ್ವಲ್ ಭಾನುವಾರ ಮಧ್ಯಾಹ್ನ 3 ಗಂಟೆ ವೇಳೆಗೆ ಕೆನರಾ ಕಾಲೇಜಿನ ಮುಖ್ಯದ್ವಾರದ ಒಳಗೆ ಪ್ರವೇಶಿಸಿ ಅಲ್ಲಿಂದ ಕಾರಾಗೃಹದ ಒಳಗೆ ಕೆಂಪು ಬಣ್ಣದ ಗಮ್‌ಟೇಪ್‌ನಿಂದ ಸುತ್ತಿದ ಪೊಟ್ಟಣಗಳನ್ನು ಎಸೆಯಲು ಯತ್ನಿಸುತ್ತಿದ್ದ. ಇದನ್ನು ಗಮನಿಸಿದ ಗಸ್ತುನಿರತ ಕೆಎಸ್‌ಐಎಸ್‌ಎಫ್ ಸಿಬ್ಬಂದಿ ಆರೋಪಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಪೊಟ್ಟಣದೊಳಗೆ ಎರಡು ಕೀ ಪ್ಯಾಡ್ ಮೊಬೈಲ್ ಮತ್ತು ಎರಡು ಪ್ಯಾಕೆಟ್ ಸಿಗರೇಟ್ ಇತ್ತು ಎಂದು ಪ್ರಕರಣ ದಾಖಲಿಸಿರುವ ಬರ್ಕೆ ಪೊಲೀಸರು ತಿಳಿಸಿದ್ದಾರೆ.

- Advertisement -

Latest News

error: Content is protected !!