Friday, June 5, 2026
Homeಕರಾವಳಿಬಂಟ್ವಾಳ: ಪಾಂಡವರಕಲ್ಲಿನಲ್ಲಿ ವಿದ್ಯುತ್ ಶಾಕ್ ತಗುಲಿ ವ್ಯಕ್ತಿ ಸಾವು

ಬಂಟ್ವಾಳ: ಪಾಂಡವರಕಲ್ಲಿನಲ್ಲಿ ವಿದ್ಯುತ್ ಶಾಕ್ ತಗುಲಿ ವ್ಯಕ್ತಿ ಸಾವು

- Advertisement -
- Advertisement -

ಬಂಟ್ವಾಳ: ಕಟ್ಟಡದಲ್ಲಿ ಕಾಂಕ್ರೀಟ್ ಕೆಲಸ ಮುಗಿಸಿ ವಿದ್ಯುತ್ತಿನ ಸ್ವಿಚ್ ಆಫ್ ಮಾಡಲು ಹೋದಾಗ ವಿದ್ಯುತ್ ಶಾಕ್ ತಗಲಿ ವ್ಯಕ್ತಿ ಸಾವನ್ನಪ್ಪಿರುವ ಘಟನೆ ಬಂಟ್ವಾಳ ತಾಲೂಕಿನ ಬಡಗಕಜೆಕಾರು ಗ್ರಾಮ ಪಾಂಡವರಕಲ್ಲಿನಲ್ಲಿ ನಡೆದಿದೆ. ಪಾಂಡವರಕಲ್ಲು ನಿವಾಸಿ ಇಬ್ರಾಹಿಂ (44) ಮೃತ ದುರ್ದೈವಿ.

ಇಬ್ರಾಹಿಂ ಅವರು ಇಲ್ಲಿನ ಜುಮ್ಮಾ ಮಸೀದಿಯ ಪಕ್ಕದ ಕಟ್ಟಡದಲ್ಲಿ ಕಾಂಕ್ರೀಟ್ ಕೆಲಸ ಮುಗಿಸಿ ವಿದ್ಯುತ್ತಿನ ಸ್ವಿಚ್ ಆಫ್ ಮಾಡಲು ಹೋದಾಗ ವಿದ್ಯುತ್ ಶಾಕ್ ತಗಲಿ ಸಾವನ್ನಪ್ಪಿದ್ದಾರೆ.

ಮದ್ರಸಾ ಕಟ್ಟಡದ ಸೆಂಟ್ರಿಂಗ್ ಕೆಲಸ ರಾತ್ರಿ 10.30ರ ವವರೆಗೂ ನಡೆದಿದ್ದು, ಬಳಿಕ ಇಬ್ರಾಹಿಂ ಅವರು ವಿದ್ಯುತ್ತಿನ ಸ್ವಿಚ್ ಆಫ್ ಮಾಡಲು ಹೋದಾಗ ಅನಾಹುತ ಸಂಭವಿಸಿದೆ.

- Advertisement -

Latest News

error: Content is protected !!