Thursday, June 4, 2026
Homeಕರಾವಳಿಉಡುಪಿರೈಲಿನಲ್ಲಿ  4ಲಕ್ಷ ರೂ. ಮೌಲ್ಯದ ಬ್ಯಾಗ್‌ ಬಾಕಿ; ಅಧಿಕಾರಿಗಳ ಸಹಾಯದಿಂದ ಸುರಕ್ಷಿತವಾಗಿ ಬ್ಯಾಗ್ ಮರಳಿ ಪಡೆದ...

ರೈಲಿನಲ್ಲಿ  4ಲಕ್ಷ ರೂ. ಮೌಲ್ಯದ ಬ್ಯಾಗ್‌ ಬಾಕಿ; ಅಧಿಕಾರಿಗಳ ಸಹಾಯದಿಂದ ಸುರಕ್ಷಿತವಾಗಿ ಬ್ಯಾಗ್ ಮರಳಿ ಪಡೆದ ಯಾತ್ರಿಕ

- Advertisement -
- Advertisement -

ಉಡುಪಿ: ಮತ್ಸ್ಯಗಂಧ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಪ್ರಯಾಣಿಸುತಿದ್ದ ವೇಳೆ ಯುವಕನೋರ್ವನ ಬ್ಯಾಗ್ ರೈಲಿನಲ್ಲೇ ಬಾಕಿಯಾಗಿದ್ದು, ಇದಕ್ಕೆ ಸಕಾಲದಲ್ಲಿ ಸ್ಪಂದಿಸಿದ ಉಡುಪಿ ರೈಲ್ವೇ ನಿಲ್ದಾಣದ ರೈಲ್ವೇ ರಕ್ಷಣಾ ತಂಡದ (ಆರ್‌ಪಿಎಫ್) ಅಧಿಕಾರಿಗಳು ವಾರಸುದಾರರಿಗೆ ಬ್ಯಾಗ್‌ ಸುರಕ್ಷಿತವಾಗಿ ಮರಳಿ ತಲುಪಿಸುವಲ್ಲಿ ಯಶಸ್ವಿಯಾಗಿದ್ದಾರೆ.

 ಬೈಂದೂರು ರೈಲ್ವೇ ನಿಲ್ದಾಣದಲ್ಲಿ ಡಿಬೋರ್ಡಿಂಗ್‌ ಮಾಡುವಾಗ ಸನತ್‌ ದೇವಾಡಿಗ ಎಂಬವರು ಬ್ಯಾಗ್‌ ಅನ್ನು ರೈಲ್ವೇ ಕೋಚ್‌ನಲ್ಲಿ ಮರೆತು ಇಳಿದಿದ್ದರು. ಗಮನಕ್ಕೆ ಬಂದ ತತ್‌ಕ್ಷಣ ಅವರು ರೈಲ್ವೇ ಕಂಟ್ರೋಲ್‌ ನಂಬರ್‌ 139 ಅನ್ನು ಸಂಪರ್ಕಿಸಿ ಮಾಹಿತಿ ಹಂಚಿಕೊಂಡಿದ್ದಾರೆ. ತದನಂತರ ಅಧಿಕಾರಿಗಳು ಬ್ಯಾಗನ್ನು ಪತ್ತೆಹಚ್ಚಿ, ವಾರಸುದಾರರಿಗೆ ಮಾಹಿತಿ ನೀಡಿದ್ದು, ಅವರು ರೈಲ್ವೇ ನಿಲ್ದಾಣಕ್ಕೆ ಬಂದು ಲಗೇಜ್‌ನ ಗುರುತು ನೀಡಿ ಸೊತ್ತುಗಳನ್ನು ಪಡೆದುಕೊಂಡರು.

ರೈಲಿನಲ್ಲಿ ಮರೆತಿದ್ದ ಬ್ಯಾಗ್‌ನಲ್ಲಿ ಚಿನ್ನಾಭರಣ ಮತ್ತು ಎರಡು ಲ್ಯಾಪ್‌ಟಾಪ್‌ ಸೇರಿ 4ಲಕ್ಷ ರೂ. ಮೌಲ್ಯದ ಸೊತ್ತುಗಳಿದ್ದವು. 

- Advertisement -

Latest News

error: Content is protected !!