ಸುಬ್ರಮಣ್ಯ; ಅರ್ಚಕರ ಮನೆಯಿಂದ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಕಳ್ಳತನ ಮಾಡಿರುವ ಘಟನೆ ಕುಕ್ಕೆ ಸುಬ್ರಮಣ್ಯದಲ್ಲಿ ನಡೆದಿದೆ. ಸಂಪುಟ ನರಸಿಂಹ ಸ್ವಾಮಿ ಶ್ರೀ ಸುಬ್ರಹ್ಮಣ್ಯ ಮಠದ ವಸತಿ ಗೃಹದಲ್ಲಿ ವಾಸವಿದ್ದ ಆನಂದ ಭಟ್ ಎಂಬವರ ಮನೆಯಿಂದ ನವರತ್ನಗಳಿರುವ ಚಿನ್ನದ ತುಳಸಿಯ ಮಣಿಸರ ಸಹಿತ ಲಕ್ಷ ರೂ ಮೌಲ್ಯದ ಚಿನ್ನಾಭರಣ ಕಳವು ಮಾಡಲಾಗಿದೆ.
ಸುಬ್ರಹ್ಮಣ್ಯ ಮಠದಲ್ಲಿ ಅರ್ಚಕರಾಗಿರುವ ಆನಂದ ಭಟ್ ಮನೆಯಲ್ಲಿ ಡಿ.22 ರಂದು ಬೆಳಗ್ಗಿನ ಜಾವ ಕಳ್ಳತನ ನಡೆದಿದೆ.ಡಿ.22 ರ ಮುಂಜಾನೆ 4:30 ರ ಸಮಯಕ್ಕೆ ಪೂಜೆ ಸಲುವಾಗಿ ಮಠಕ್ಕೆ ತೆರಳಿದ್ದು ಮಧ್ಯಾಹ್ನ ವೇಳೆ ಮರಳಿ ಮನೆಗೆ ಬಂದಾಗ ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿದೆ. ಮನೆಯಲ್ಲಿನ ವಸ್ತುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದಲ್ಲದೆ, ಕಪಾಟಿನಲ್ಲಿದ್ದ ಚಿನ್ನಾಭರಣಗಳು ಕಳವಾಗಿದ್ದು ಒಟ್ಟು ಮೌಲ್ಯ 1,15,000 ಎಂದು ಠಾಣೆಗೆ ನೀಡಿದ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ಘಟನಾ ಸ್ಥಳಕ್ಕೆ ಸುಬ್ರಹ್ಮಣ್ಯ ಪಿ ಎಸ್.ಐ ಕಾರ್ತಿಕ್, ಅಪರಾಧ ಸ್ಥಳ ಪರಿಶೀಲನಾಧಿಕಾರಿ ಅರ್ಪಿತಾ,ಸುಮನ್ ಬಿ.ಎಂ, ಶ್ವಾನದಳ ವಿಭಾಗದ ಜಯಪ್ರಕಾಶ್, ಬೆರಳಚ್ಚು ತಜ್ಞರಾದ ಸಚಿನ್, ಉದಯ ಆಗಮಿಸಿ ಪರಿಶೀಲಿಸಿದ್ದಾರೆ.


