Thursday, June 4, 2026
Homeಚಿಕ್ಕಮಗಳೂರುಚಿಕ್ಕಮಗಳೂರು; ಕಾಫಿನಾಡಲ್ಲಿ ಆನೆ ದಾಳಿಗೆ ಮತ್ತೊಂದು ಬಲಿ

ಚಿಕ್ಕಮಗಳೂರು; ಕಾಫಿನಾಡಲ್ಲಿ ಆನೆ ದಾಳಿಗೆ ಮತ್ತೊಂದು ಬಲಿ

- Advertisement -
- Advertisement -

ಚಿಕ್ಕಮಗಳೂರು; ಕಾಫಿನಾಡಲ್ಲಿ ಆನೆ ದಾಳಿಗೆ ಮತ್ತೊಬ್ಬ ವ್ಯಕ್ತಿ ಬಲಿಯಾಗಿದ್ದಾರೆ. ಎಲಿಯಾಸ್ (75) ಮೃತ ದುರ್ದೈವಿ. ಎನ್.ಆರ್.ಪುರ ತಾಲೂಕಿನ ಮಡಬೂರು ಗ್ರಾಮದ ಬಳಿ ಘಟನೆ ನಡೆದಿದೆ.

ಎನ್.ಆರ್.ಪುರ ತಾಲೂಕಿನಲ್ಲಿ 20 ದಿನಗಳ ಹಿಂದೆ ಕಾಡಾನೆ ದಾಳಿಗೆ ಉಮೇಶ್ ಎಂಬ ವ್ಯಕ್ತಿ ಬಲಿಯಾಗಿದ್ದರು. ಇದೀಗ ಮತ್ತೊಬ್ಬ ವ್ಯಕ್ತಿಯನ್ನು ಕಾಡಾನೆ ಬಲಿ ಪಡೆದಿದೆ.

ತೋಟಕ್ಕೆ ಹೋಗಿದ್ದ ತಂದೆ-ಮಗನ ಮೇಲೆ ಒಂಟಿ ಸಲಗ ದಾಳಿ ಮಾಡಿದೆ. ಮಗ ಓಡಿ ಹೋಗಿ ತಪ್ಪಿಸಿಕೊಂಡಿದ್ದಾನೆ, ತಂದೆ ಆನೆ ದಾಳಿಗೆ ಬಲಿಯಾಗಿದ್ದಾರೆ. ತಂದೆ ಎಲಿಯಾಸ್ ಸಾವನ್ನಪ್ಪಿದ್ದರೆ, ಮಗ ವರ್ಗೀಸ್ ಪಾರಾಗಿದ್ದಾರೆ.

ಎಲಿಯಾಸ್ ಕೇರಳದಿಂದ ಬಂದು ಅಡಿಕೆ-ಬಾಳೆ ತೋಟ ಮಾಡಿಕೊಂಡಿದ್ದರು. ಆನೆ ಎಲಿಯಾಸ್ ಅವರನ್ನು ಸಾಯಿಸಿದ ಬಳಿಕ ಮೃತದೇಹ ಸುತ್ತುತ್ತಾ ಸ್ಥಳದಲ್ಲೇ ನಿಂತಿತ್ತು. ಮೃತದೇಹಕ್ಕೆ ಒದೆಯುತ್ತಾ,  ಘೀಳಿಡುತ್ತಾ ಸ್ಥಳದಲ್ಲೇ ನಿಂತಿತ್ತು ಎನ್ನಲಾಗಿದೆ. ಅರಣ್ಯ ಇಲಾಖೆ ವಿರುದ್ಧ ಮಲೆನಾಡಿಗರು ಆಕ್ರೋಶ ಹೊರ ಹಾಕಿದ್ದಾರೆ.

- Advertisement -

Latest News

error: Content is protected !!