Friday, June 5, 2026
Homeಕರಾವಳಿಕಡಬ; ರಬ್ಬರ್ ಟ್ಯಾಪಿಂಗ್ ಮಾಡುತ್ತಿದ್ದವರ ಮೇಲೆ ಹಲ್ಲೆ, ಜೀವ ಬೆದರಿಕೆ

ಕಡಬ; ರಬ್ಬರ್ ಟ್ಯಾಪಿಂಗ್ ಮಾಡುತ್ತಿದ್ದವರ ಮೇಲೆ ಹಲ್ಲೆ, ಜೀವ ಬೆದರಿಕೆ

- Advertisement -
- Advertisement -

ಕಡಬ; ರಬ್ಬರ್ ಟ್ಯಾಪಿಂಗ್ ಮಾಡುತ್ತಿದ್ದವರ ಮೇಲೆ ಹಲ್ಲೆ ಮಾಡಿ ಜೀವ ಬೆದರಿಕೆ ಹಾಕಿದ ಘಟನೆ ಕಡಬ ಗ್ರಾಮದ ಪಾಲೋಳಿ ಎಂಬಲ್ಲಿ ನಡೆದಿದೆ. ಇಲ್ಲಿನ ಸಾಬು ಚೆರಿಯನ್ ಎಂಬರಿಗೆ ಸೇರಿದ ನಾಲ್ಕು ಎಕರೆಯ ರಬ್ಬರ್ ತೋಟಕ್ಕೆ ಡಿ. 15 ರಂದು ಮುಂಜಾನೆ   ರಬ್ಬರ್ ಟ್ಯಾಪಿಂಗ್ ಮಾಡಲು ಶೋಭಿ, ದಿನೇಶ್, ಸಿಬಿ ಎಂಬ ಮೂವರು ತೆರಳಿದ್ದರು. 

ಅಬ್ರಹಾಂ ಮತ್ತು ಇತರರು ಅಕ್ರಮ ಪ್ರವೇಶ ಮಾಡಿ ರಬ್ಬರ್ ತೋಟದಲ್ಲಿ ಟ್ಯಾಂಪಿಂಗ್ ಮಾಡುತ್ತಿದ್ದ  ಮೂವರಿಗೆ ನಿಮ್ಮನ್ನು ಇಲ್ಲಿ ಯಾರು ರಬ್ಬರ್ ಟ್ಯಾಪಿಂಗ್ ಮಾಡಲು  ಹೇಳಿದ್ದು ಎಂದು ಹೇಳಿ ಅವಾಚ್ಯ ಶಬ್ದಗಳಿಂದ ಬೈದು ಇನ್ನು ಮುಂದೆ ಟ್ಯಾಪಿಂಗ್ ಮಾಡಿದರೆ ನಿಮ್ಮನ್ನು ಜೀವ ಸಹಿತ ಬಿಡುವುದಿಲ್ಲ. ಎಂದು ಬೆದರಿಕೆ ಹಾಕಿ, ಹಲ್ಲೆ ಮಾಡಿದ್ದಾರೆ ಎಂದು ಕಡಬ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.

- Advertisement -

Latest News

error: Content is protected !!