Friday, June 5, 2026
Homeಕರಾವಳಿಕಡಬ: ಅಂಗವೈಕಲ್ಯವನ್ನು ಮೆಟ್ಟಿನಿಂತು ಪಿಯುಸಿಯಲ್ಲಿ ಉತ್ತಮ ಅಂಕ ಪಡೆದ ಎಂಡೋಪೀಡಿತ ವಿದ್ಯಾರ್ಥಿ

ಕಡಬ: ಅಂಗವೈಕಲ್ಯವನ್ನು ಮೆಟ್ಟಿನಿಂತು ಪಿಯುಸಿಯಲ್ಲಿ ಉತ್ತಮ ಅಂಕ ಪಡೆದ ಎಂಡೋಪೀಡಿತ ವಿದ್ಯಾರ್ಥಿ

- Advertisement -
- Advertisement -

ಕಲ್ಲುಗುಡ್ಡೆ: ಕಡಬ ತಾಲೂಕಿನ ರೆಂಜಿಲಾಡಿ ಗ್ರಾಮದ ವಿದ್ಯಾರ್ಥಿಯೋರ್ವ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಎಂಡೋಸಲ್ಫಾನ್ ನಿಂದ ತನಗಾದ ಅಂಗವೈಕಲ್ಯವನ್ನೂ ಮೆಟ್ಟಿನಿಂತು ಉತ್ತಮ ಸಾಧನೆ ಮಾಡಿದ್ದಾರೆ.

ಶೇ. 85ರಷ್ಟು ಎಂಡೋ ಪೀಡಿತರಾಗಿರುವ ವಿದ್ಯಾರ್ಥಿ ಮನೋಜ್‌ ಕುಮಾರ್ ಮಂಗಳೂರಿನ ಸೇವಾಭಾರತಿ ನಡೆಸುತ್ತಿರುವ ರಾಮಕುಂಜ ಕಾಜರುಕುಕ್ಕು ವಿದ್ಯಾಚೇತನಾ ವಿಶೇಷ ಮಕ್ಕಳ ಶಾಲೆಯಲ್ಲಿ ಪಿಯುಸಿ ಪರೀಕ್ಷೆಗೆ ತರಬೇತಿ ಪಡೆದು ಕಲಾ ವಿಭಾಗದಲ್ಲಿ 360 ಅಂಕ ಪಡೆದು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ.

ಮನೋಜ್‌ ಕುಮಾರ್ ರ‌ ಕಿವಿ, ಕೈ ಎಲುಬು ಸಮಸ್ಯೆಯಿಂದ ಬಳಲುತ್ತಿದ್ದು, ನಾಲ್ಕು ಬಾರಿ ಶಸ್ತ್ರಚಿಕಿತ್ಸೆಗೂ ಒಳಗಾಗಿದ್ದಾರೆ. ಇವರು ತನ್ನ ಆರೋಗ್ಯ ಸಮಸ್ಯೆಯನ್ನು ಮೆಟ್ಟಿನಿಂತು ಸಾಧನೆ ಮಾಡಿದ್ದಾರೆ.

- Advertisement -

Latest News

error: Content is protected !!