Monday, June 17, 2024
Homeತಾಜಾ ಸುದ್ದಿಸಚಿನ್ ಪೈಲಟ್ ವಜಾಕ್ಕೆ ಕಾಂಗ್ರೆಸ್ ನಾಯಕ ಶಶಿ ತರೂರ್ ಬೇಸರ

ಸಚಿನ್ ಪೈಲಟ್ ವಜಾಕ್ಕೆ ಕಾಂಗ್ರೆಸ್ ನಾಯಕ ಶಶಿ ತರೂರ್ ಬೇಸರ

spot_img
- Advertisement -
- Advertisement -

ನವದೆಹಲಿ :ಇತ್ತೀಚಿಗೆ ರಾಜಸ್ತಾನದಲ್ಲಿ ನಡೆದ ಕೆಲವೊಂದು ರಾಜಕೀಯ ಬೆಳವಣಿಗೆಯಲ್ಲಿ ,ಯುವ ಕಾಂಗ್ರೆಸ್ ನಾಯಕ , ರಾಜಸ್ಥಾನ ಉಪಮುಖ್ಯಮಂತ್ರಿ ಮತ್ತು ಕಾಂಗ್ರೆಸ್‌ ರಾಜ್ಯ ಘಟಕದ ಅಧ್ಯಕ್ಷ ಸ್ಥಾನದಿಂದ ಸಚಿನ್‌ ಪೈಲಟ್‌ ವಜಾಗೊಂಡಿರುವುದಕ್ಕೆ ಪಕ್ಷದ ಹಿರಿಯ ನಾಯಕ ಶಶಿ ತರೂರ್ ಬೇಸರ ವ್ಯಕ್ತಪಡಿಸಿದ್ದಾರೆ.
ಟ್ವೀಟ್ ನಲ್ಲಿ ಏನಿದೆ ?
‘ಸಚಿನ್ ಪೈಲಟ್ ಅವರು ಕಾಂಗ್ರೆಸ್‌ನಿಂದ ನಿರ್ಗಮಿಸುತ್ತಿರುವುದು ಬೇಸರ ಉಂಟುಮಾಡಿದೆ. ಹೀಗಾಗಬಾರದಿತ್ತು. ಅವರೊಬ್ಬ ಅತ್ಯುತ್ತಮ ಮತ್ತು ಕುಶಾಗ್ರಮತಿ ನಾಯಕ. ಈ ನಿರ್ಧಾರ ಕೈಗೊಳ್ಳುವ ಬದಲು ಅವರು, ಅವರದೇ ಆದ ಮತ್ತು ನಮ್ಮೆಲ್ಲರ ಕನಸಾದ ಪಕ್ಷವನ್ನು ಇನ್ನಷ್ಟು ಬಲಪಡಿಸುವ ಮತ್ತು ಪರಿಣಾಮಕಾರಿಯನ್ನಾಗಿಸುವ ಕಾರ್ಯಕ್ಕೆ ಕೈಜೋಡಿಸಬೇಕಾಗಿತ್ತು’ ಎಂದು ತರೂರ್ ಟ್ವೀಟ್ ಮಾಡಿದ್ದಾರೆ.

- Advertisement -
spot_img

Latest News

error: Content is protected !!