Monday, June 8, 2026
Homeತಾಜಾ ಸುದ್ದಿಅಮ್ಮನಿಗಾಗಿ ದೇಗುಲವನ್ನೇ ಕಟ್ಟಿಸಿದ ವಿನೋದ್ ರಾಜ್; ತಾಯಿಯೇ ದೇವರು, ವರನಟಿ ಡಾ.ಲೀಲಾವತಿ ದೇಗುಲ

ಅಮ್ಮನಿಗಾಗಿ ದೇಗುಲವನ್ನೇ ಕಟ್ಟಿಸಿದ ವಿನೋದ್ ರಾಜ್; ತಾಯಿಯೇ ದೇವರು, ವರನಟಿ ಡಾ.ಲೀಲಾವತಿ ದೇಗುಲ

- Advertisement -
- Advertisement -

ಬೆಂಗಳೂರು: ಹಿರಿಯ ನಟಿ ಡಾ.ಲೀಲಾವತಿಗಾಗಿ ಮಗ ವಿನೋದ್ ರಾಜ್ ನಿರ್ಮಿಸಿರುವ ಸ್ಮಾರಕದ ಉದ್ಘಾಟನೆಯು ಡಿ.05 ಗುರುವಾರದಂದು ಸೋಲದೇವನಹಳ್ಳಿಯಲ್ಲಿ ಜರುಗಿದೆ.

ನೆಲಮಂಗಲ ತಾಲೂಕಿನ ಸೋಲದೇವನಹಳ್ಳಿಯ ತೋಟದಲ್ಲಿ ನಿರ್ಮಿಸಿರುವ ‘ತಾಯಿಯೇ ದೇವರು, ವರನಟಿ ಡಾ.ಲೀಲಾವತಿ ದೇಗುಲ’ ಸ್ಮಾರಕವನ್ನು ಸಚಿವ ಕೆ.ಎಚ್ ಮುನಿಯಪ್ಪ ಅವರು ಉದ್ಘಾಟಿಸಿದರು.  

ಉದ್ಘಾಟನಾ ಸಮಾರಂಭವು ಕುಟುಂಬಸ್ಥರು, ಆಪ್ತರ ಸಮ್ಮುಖದಲ್ಲಿ ನಡೆದಿದ್ದು, ಬೆಳಗ್ಗೆ ಹೋಮ, ಹವನ, ಪೂಜೆಯನ್ನು ನಡೆಸಲಾಯಿತು.  

ಲೀಲಾವತಿ ಅವರು ಕಳೆದ ವರ್ಷ ಡಿ.8ರಂದು ಇಹಲೋಕ ತ್ಯಜಿಸಿದ್ದು, ತಮ್ಮ ನಟನಾ ಕೌಶಲ್ಯದಿಂದ ಬಹುಭಾಷಾ ನಟಿಯಾಗಿ ಮಿಂಚಿದ್ದರು.

ಇದೀಗ ತನ್ನ ಅಮ್ಮನ ಸವಿನೆನಪಿಗಾಗಿ ವಿನೋದ್ ರಾಜ್ ದೇಗುಲವನ್ನೇ ಕಟ್ಟಿಸಿದ್ದಾರೆ. ವಿಶೇಷವೆನ್ನುವಂತೆ ಇಲ್ಲಿ ಲೀಲಾವತಿಯವರ ಬಾಲ್ಯದಿಂದ ಬದುಕಿನ ಕೊನೆ ಕ್ಷಣದವರೆಗೂ ಸವೆಸಿ ಹೋದ ಕಾಲಘಟ್ಟಗಳ 60ಕ್ಕೂ ಹೆಚ್ಚು ಫೋಟೋಗಳನ್ನು ಕಾಣಬಹುದಾಗಿದೆ.   

- Advertisement -

Latest News

error: Content is protected !!