Monday, August 31, 2026
Homeಕರಾವಳಿಮಂಗಳೂರು; ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಕೈ ನಾಯಕರ ಮಧ್ಯೆ ಹೊಡೆದಾಟ

ಮಂಗಳೂರು; ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಕೈ ನಾಯಕರ ಮಧ್ಯೆ ಹೊಡೆದಾಟ

- Advertisement -
- Advertisement -

ಮಂಗಳೂರು; ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಕೈ ನಾಯಕರ ಮಧ್ಯೆ ಹೊಡೆದಾಟ ನಡೆದಿದೆ ಮಲ್ಲಿಕಟ್ಟೆ ಬಳಿ ಇರುವ ಜಿಲ್ಲಾ ಕಾಂಗ್ರೆಸ್​ ಪಕ್ಷದ ಕಚೇರಿಯಲ್ಲಿ ಪಂಚಾಯಿತಿ ಉಪ ಚುನಾವಣೆಯಲ್ಲಿ ಆಯ್ಕೆಯಾದವರನ್ನು ಸನ್ಮಾನಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಹೊಡೆದಾಟ ನಡೆದಿದೆ.

ಕಾಂಗ್ರೆಸ್ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಹರೀಶ್​ ಕುಮಾರ್ ಹಾಗೂ ಕಾಂಗ್ರೆಸ್ ಮುಖಂಡ ಪ್ರಕಾಶ್ ಶೆಟ್ಟಿ ತುಂಬೆ ಹೊಡೆದಾಡಿಕೊಂಡಿದ್ದಾರೆ ಎನ್ನಲಾಗಿದೆ.ತಕ್ಷಣ ಕಾಂಗ್ರೆಸ್ ಕಚೇರಿಗೆ ಪೊಲೀಸರು ಆಗಮಿಸಿದ್ದಾರೆ. ಸಂಟ್ರಲ್ ಎಸಿಪಿ ಮತ್ತು ಕದ್ರಿ ಪೊಲೀಸರು ಆಗಮಿಸಿದ್ದಾರೆ. ಉಭಯ ಗುಂಪುಗಳ ನಡುವೆ ಸಂಧಾನ ನಡೆಯುತ್ತಿದೆ.

ಮುಂಜಾಗ್ರತಾ ಕ್ರಮವಾಗಿ ಹೆಚ್ಚುವರಿ ಪೊಲೀಸ್ ನಿಯೋಜನೆ ಮಾಡಲಾಗಿದೆ. ಒಂದು ಕೆಎಸ್​ಆರ್​ಪಿ ತುಕಡಿ ನಿಯೋಜನೆ ಮಾಡಲಾಗಿದೆ.

- Advertisement -

Latest News

error: Content is protected !!