- Advertisement -
![]()
- Advertisement -
ಮಂಗಳೂರು: ಡೇಟಿಂಗ್ ಆ್ಯಪ್ ಮೂಲಕ ಪರಿಚಯವಾದ ಯುವತಿಯೊಬ್ಬಳು ವ್ಯಕ್ತಿಯೋರ್ವರಿಗೆ ವೆಬ್ಸೈಟ್ ಮೂಲಕ ಹೂಡಿಕೆ ಮಾಡಿಸಿ 7.30 ಲ.ರೂ. ವಂಚಿಸಿರುವ ಘಟನೆ ನಡೆದಿದೆ.
ಡೇಟಿಂಗ್ ಆ್ಯಪ್ ಮೂಲಕ ಆರೋಪಿ ಇರಾ ಪಾಂಡೆ ಎನ್ನುವಾಕೆ ದೂರುದಾರರೊಂದಿಗೆ ಪರಿಚಯ ಮಾಡಿಕೊಂಡು ಸ್ಪ್ರೆಡೆಕ್ಸ್ ಎಂಬ ವೆಬ್ಸೈಟ್ ಮೂಲಕ ಹಣ ಹೂಡಿಕೆ ಮಾಡುವಂತೆ ತಿಳಿಸಿದ್ದಾಳೆ. ನಂತರದಲ್ಲಿ ಅದೇ ವೆಬ್ಸೈಟ್ ಅನ್ನು ಹೋಲುವಂತಹ ಬೇರೊಂದು ವೆಬ್ಸೈಟ್ ಲಿಂಕ್ ಕಳುಹಿಸಿ, ಅದರ ಮೂಲಕ ಹಂತ ಹಂತವಾಗಿ ಹೂಡಿಕೆ ಮಾಡಿಸಿದ್ದಳು ಎನ್ನಲಾಗಿದೆ.
ಈವರೆಗೂ ದೂರುದಾರರು ಒಟ್ಟು 8.50 ಲ.ರೂ. ಹೂಡಿಕೆ ಮಾಡಿದ್ದರು. ಅದರಲ್ಲಿ 1.20 ಲ.ರೂ. ವಿದ್ಡ್ರಾ ಮಾಡಿದ್ದರು ಎನ್ನಲಾಗಿದೆ. ಉಳಿದ ಮೊತ್ತ 7.30 ಲ.ರೂ. ವಾಪಸ್ ಪಡೆಯಬೇಕಾದರೆ ಶೇ. 30ರಷ್ಟು ತೆರಿಗೆ ಪಾವತಿಸಬೇಕು ಎಂದು ತಿಳಿಸಿದ್ದಳು. ಇದನ್ನರಿತ ದೂರುದಾರರು ತಾವು ಮೋಸ ಹೋಗಿರುವುದು ಗೊತ್ತಾಗಿ ಪೊಲೀಸರಿಗೆ ದೂರು ನೀಡಿದ್ದಾರೆ.
- Advertisement -


