Thursday, June 4, 2026
Homeಕರಾವಳಿಮಂಗಳೂರುಮಂಗಳೂರು; ಹೆಲ್ಮೆಟ್ ನಿಂದ ಕೆಎಸ್ ಆರ್ಟಿಸಿ ಅಶ್ವಮೇಧ ಬಸ್ ನ ಗಾಜು ಪುಡಿ ಮಾಡಿದ ಬೈಕ್...

ಮಂಗಳೂರು; ಹೆಲ್ಮೆಟ್ ನಿಂದ ಕೆಎಸ್ ಆರ್ಟಿಸಿ ಅಶ್ವಮೇಧ ಬಸ್ ನ ಗಾಜು ಪುಡಿ ಮಾಡಿದ ಬೈಕ್ ಸವಾರ

- Advertisement -
- Advertisement -

ಮಂಗಳೂರು; ಬೈಕ್ ಸವಾರನೊಬ್ಬ ಹೆಲ್ಮೆಟ್ ನಿಂದ ಕೆಎಸ್ ಆರ್ಟಿಸಿ ಅಶ್ವಮೇಧ ಬಸ್ ನ ಗಾಜು ಪುಡಿ ಮಾಡಿದ ಘಟನೆ ಅಳಪೆ ಎಂಬಲ್ಲಿ ಭಾನುವಾರ ಸಂಜೆ ನಡೆದಿದೆ.
ಮಂಗಳೂರಿನಿಂದ ಬೆಂಗಳೂರು ಕಡೆಗೆ ತೆರಳುತ್ತಿದ್ದ ಬಸ್‌ಗೆ ಅಳಪೆ ಬಳಿ ಬೈಕ್ ಸವಾರ ಅಡ್ಡ ಬಂದಿದ್ದಾನೆ. ಈ ವೇಳೆ ಕೆಎಸ್ ಆರ್ ಟಿಸಿ ಬಸ್ ಚಾಲಕ ಇದನ್ನು ಪ್ರಶ್ನಿಸಿದ್ದಾರೆ. ಅದಕ್ಕೆ ಕೋಪಗೊಂಡ ಬೈಕ್ ಸವಾರ  ಬಸ್‌ನ ಗಾಜಿಗೆ ಹೆಲ್ಮೆಟ್‌ನಿಂದ ಬಡಿದು ಪರಾರಿಯಾದ್ದಾನೆ. ಬಸ್‌ ಚಾಲಕ ಅರುಣ್ ಎಂಬವರ ಕೈಗೆ ಗಾಯವಾಗಿದೆ ಎಂದು ತಿಳಿದು ಬಂದಿದೆ.

- Advertisement -

Latest News

error: Content is protected !!