Monday, June 29, 2026
Homeಕರಾವಳಿಕೂಲಿ ಕಾರ್ಮಿಕ ಮಹಿಳೆ ಬ್ಯೂಟಿ ಪಾರ್ಲರ್‌ಗೆ ಹೋಗುವುದಾಗಿ ತೆರಳಿ ನಾಪತ್ತೆ

ಕೂಲಿ ಕಾರ್ಮಿಕ ಮಹಿಳೆ ಬ್ಯೂಟಿ ಪಾರ್ಲರ್‌ಗೆ ಹೋಗುವುದಾಗಿ ತೆರಳಿ ನಾಪತ್ತೆ

- Advertisement -
- Advertisement -

ಸುಳ್ಯ: ಇಲ್ಲಿ ಕೂಲಿ ಕಾರ್ಮಿಕರಾಗಿ ಕೆಲಸ ಮಾಡಿಕೊಂಡಿದ್ದ ಮಹಿಳೆಯೋರ್ವರು ನ. 20ರಂದು ನಾಪತ್ತೆಯಾಗಿದ್ದಾರೆ ಎಂದು ಸುಳ್ಯ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

ನಾಪತ್ತೆಯಾದ ಮಹಿಳೆ ದಾವಣಗೆರೆ ಜಿಲ್ಲೆಯ ಚೆನ್ನಗಿರಿಯ ಮಂಗಳ ಯಾನೆ ಕಾವ್ಯಾ (28) ಎನ್ನಲಾಗಿದೆ.

ಮಂಗಳ ಯಾನೆ ಕಾವ್ಯಾ ಅವರು ನ.20 ರಂದು ಬ್ಯೂಟಿ ಪಾರ್ಲರ್ ಗೆ ಹೋಗುವುದಾಗಿ ತಿಳಿಸಿ ಮತ್ತೆ ಮನೆಗೆ ಬಾರದೆ ನಾಪತ್ತೆಯಾಗಿದ್ದಾರೆ ಎನ್ನಲಾಗಿದೆ. ಕಾವ್ಯಾ ಅವರು ಕೆ.ಎಂ.ವಿಕ್ರಂ ಅವರನ್ನ ಮದುವೆಯಾಗಿದ್ದರು. ವಿಕ್ರಂ ಮನೆಯವರ ಒಪ್ಪಿಗೆ ಮೇರೆಗೆ ನ. 7ರಂದು ಕಾವ್ಯಾ ಅವರನ್ನು ಮದುವೆಯಾಗಿದ್ದು, ನ. 20ರಂದು ಮಂಗಳಾ ಯಾನೆ ಕಾವ್ಯಾ ಮನೆಗೆ ಹಿಂದಿರುಗದೆ ನಾಪತ್ತೆಯಾಗಿದ್ದಾರೆ ಎಂದು ಅವರು ದೂರಿನಲ್ಲಿ ತಿಳಿಸಲಾಗಿದೆ.

- Advertisement -

Latest News

error: Content is protected !!