Saturday, June 6, 2026
Homeಇತರಡೆಡ್ಲಿ ಕೊರೊನಾಗೆ ಮಹಿಳಾ ಜಿಲ್ಲಾಧಿಕಾರಿ ಬಲಿ

ಡೆಡ್ಲಿ ಕೊರೊನಾಗೆ ಮಹಿಳಾ ಜಿಲ್ಲಾಧಿಕಾರಿ ಬಲಿ

- Advertisement -
- Advertisement -

ಪಶ್ಚಿಮ ಬಂಗಾಳ : ಕೊರೋನ ಸೋಂಕಿಗೆ ತುತ್ತಾಗಿ ಆಸ್ಪತ್ರೆಗೆ ದಾಖಲಾಗಿದ್ದ ಪಶ್ಚಿಮ ಬಂಗಾಳದ ಹೂಗ್ಲಿ ಜಿಲ್ಲೆಯ ಜಿಲ್ಲಾಧಿಕಾರಿ ದೆಬದತ್ತ ರೇಯವರು ಇಂದು ಮೃತಪಟ್ಟಿದ್ದಾರೆ. ವಲಸೆ ಕಾರ್ಮಿಕರಿಗೆ ಅಗತ್ಯ ಸೌಕರ್ಯ ಒದಗಿಸುವ ಹೊಣೆ ವಹಿಸಿಕೊಂಡಿದ್ದ ಇವರಿಗೆ ಕೇವಲ 38 ವರ್ಷ ವಯಸ್ಸಾಗಿತ್ತು. 4 ವರ್ಷದ ಪುತ್ರನನ್ನು ಅಗಲಿದ್ದಾರೆ. ಇನ್ನು ದೆಬದತ್ತ ಅವರು ಕೊರೊನಾಗೆ ಬಲಿಯಾದ ಮೊದಲ ಜಿಲ್ಲಾಧಿಕಾರಿಯಾಗಿದ್ದಾರೆ.

ಕಳೆದ ವಾರ ಸೋಂಕು ಧೃಢಪಟ್ಟಿದ್ದರಿಂದ ಇವರು ಮನೆಯಲ್ಲೇ ಐಸೋಲೇಷನ್ ನಲ್ಲಿದ್ದರಂತೆ, ನೆನ್ನೆ ಉಸಿರಾಟದ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿದ್ದ ಇವರು ಇಂದು ಮೃತಪಟ್ಟಿದ್ದಾರೆ. ಪ್ರಾಣದ ಹಂಗು ತೊರೆದು ಜನಸಾಮಾನ್ಯರ ಸೇವೆ ಮಾಡುತ್ತಿರುವ ಎಲ್ಲ ಉನ್ನತಾಧಿಕಾರಿಗಳಿಗೆ ವಿಶೇಷ, ತುರ್ತು ಚಿಕಿತ್ಸಾ ಸೌಲಭ್ಯಗಳು ದೊರೆಯಬೇಕಿದೆ. ಇಲ್ಲದಿದ್ದರೆ ಇಂತಹವರ ಸಾವುಗಳು ಸಾಮಾನ್ಯ ಜನರ ಆತಂಕ ಹೆಚ್ಚಿಸುತ್ತವೆ ಎಂದು ಸಾಮಾಜಿಕ ಜಾಲತಾಣದಲ್ಲಿ ಜನ ಆತಂಕವನ್ನು ವ್ಯಕ್ತಪಡಿಸುತ್ತಿದ್ದಾರೆ.

- Advertisement -

Latest News

error: Content is protected !!