Wednesday, June 3, 2026
Homeಕರಾವಳಿಗ್ರಾಮ ಪಂಚಾಯಿತಿಗಳ ಉಪಚುನಾವಣೆ; 27 ವಾರ್ಡ್‌ಗಳ ಪೈಕಿ 19 ಕಡೆ ವಾರ್ಡ್‌ಗಳಲ್ಲಿ ಕಾಂಗ್ರೆಸ್‌ ಮೇಲುಗೈ

ಗ್ರಾಮ ಪಂಚಾಯಿತಿಗಳ ಉಪಚುನಾವಣೆ; 27 ವಾರ್ಡ್‌ಗಳ ಪೈಕಿ 19 ಕಡೆ ವಾರ್ಡ್‌ಗಳಲ್ಲಿ ಕಾಂಗ್ರೆಸ್‌ ಮೇಲುಗೈ

- Advertisement -
- Advertisement -

ಮಂಗಳೂರು: ಜಿಲ್ಲೆಯ ಗ್ರಾಮ ಪಂಚಾಯಿತಿಗಳ ಸದಸ್ಯರ ಸ್ಥಾನಗಳಿಗೆ ನಡೆದ ಉಪಚುನಾವಣೆಯ ಮತ ಎಣಿಕೆಯು ಮಂಗಳವಾರ ನಡೆದಿದ್ದು ಫಲಿತಾಂಶ ಪ್ರಕಟವಾಗಿದೆ.

27 ಗ್ರಾಮ ಪಂಚಾಯಿತಿಗಳ 30 ವಾರ್ಡ್‌ಗಳ 31 ಸದಸ್ಯರ ಸ್ಥಾನಕ್ಕೆ ಉಪಚುನಾವಣೆಯನ್ನು ನಡೆಸಲಾಗಿದ್ದು, ಇದೀಗ ಚುನಾವಣೆಯಲ್ಲಿ 19 ಸ್ಥಾನಗಳಲ್ಲಿ ಕಾಂಗ್ರೆಸ್‌ ಬೆಂಬಲಿತರು ಆಯ್ಕೆಯಾಗಿದ್ದಾರೆ.

ಮಂಗಳೂರಿನಲ್ಲಿ 4 ಕಾಂಗ್ರೆಸ್‌ ಹಾಗೂ 2 ಬಿಜೆಪಿ ಬೆಂಬಲಿತರ ಆಯ್ಕೆಯಾಗಿದೆ.

ಸುಳ್ಯ ತಾಲ್ಲೂಕಿನ ಮೂರು ಗ್ರಾಮ ಪಂಚಾಯಿತಿಗಳಾದ ಕೊಲ್ಲಮೊಗ್ರು, ನೆಲ್ಲೂರು ಕೆಮ್ರಾಜೆ ಹಾಗೂ ಹರಿಹರಪಲ್ಲತಡ್ಕದಲ್ಲಿ ತೆರವಾಗಿದ್ದ ಮೂರು ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದಿತ್ತು.

ಜೋಕಟ್ಟೆ ಗ್ರಾಮ ಪಂಚಾಯಿತಿಯ ತೋಕೂರು ಗ್ರಾಮದ 4ನೇ ವಾರ್ಡಿನಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಾದ ಹಸನ್ ಫಯಾಜ್‌ (ಹಿಂದುಳಿದ ವರ್ಗ.ಎ), ಗಂಜಿಮಠ ಗ್ರಾಮ ಪಂಚಾಯಿತಿಯ ಮೊಗರು 1ನೇ ವಾರ್ಡ್‌ನಲ್ಲಿ ಸುನಿಲ್‌ (ಸಾಮಾನ್ಯ),  ನೀರುಮಾರ್ಗ ಗ್ರಾಮ ಪಂಚಾಯಿತಿಯ ಬೊಂಡಂತಿಲ 2ನೇ ವಾರ್ಡ್‌ನಲ್ಲಿ ಅಶ್ರಫ್ (ಹಿ’.ವರ್ಗ ಎ), ಅಡ್ಯಾರು ಗ್ರಾಮ ಪಂಚಾಯಿತಿಯ ಐದನೇ ವಾರ್ಡ್‌ನಲ್ಲಿ ಗೌರವ ಡಿ ಶೆಟ್ಟಿ (ಸಾಮಾನ್ಯ) ಗೆದ್ದಿದ್ದಾರೆ ಎನ್ನಲಾಗಿದೆ.  

ಮೂಡುಶೆಡ್ಡೆ ಗ್ರಾಮ ಪಂಚಾಯಿತಿಯ ಆರನೇ ವಾರ್ಡ್‌ನಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಾದ ಶಶಿಕಲಾ ಬಿ (ಸಾಮಾನ್ಯ ಮಹಿಳೆ), ಮೂಡುಶೆಡ್ಡೆ 7ನೇ ವಾರ್ಡ್‌ನಲ್ಲಿ ವಿಜಯಲಕ್ಷ್ಮೀ (ಪರಿಶಿಷ್ಟ ಪಂಗಡ) ಗೆಲುವು ಸಾಧಿಸಿದ್ದಾರೆ. 

- Advertisement -

Latest News

error: Content is protected !!