- Advertisement -
![]()
- Advertisement -
ಬೆಂಗಳೂರು: “ಉಡುಪಿಯ ಪೇಜಾವರ ಮಠದ ಸ್ವಾಮೀಜಿ ಸಂವಿಧಾನ ಬದಲಾವಣೆ ಕುರಿತು ರಾಷ್ಟ್ರದ್ರೋಹದ ಹೇಳಿಕೆ ನೀಡಿದ್ದು, ಇದೀಗ ಸ್ವಾಮೀಜಿ ವಿರುದ್ಧ ಪ್ರಕರಣ ದಾಖಲಿಸಬೇಕು’ ಎಂದು ರಾಮಮನೋಹರ್ ಲೋಹಿಯಾ ವಿಚಾರ ವೇದಿಕೆ ಅಧ್ಯಕ್ಷ ಬಿ.ಎಸ್.ಶಿವಣ್ಣ ಆಗ್ರಹಿಸಿದರು.
ಈ ಕುರಿತಂತೆ ಅವರು ಪತ್ರಿಕಾ ಹೇಳಿಕೆಯಲ್ಲಿ, ಸ್ವಾಮೀಜಿಯ ಸಂವಿಧಾನದ ಬದಲಾವಣೆಯ ಹೇಳಿಕೆಯ ಕುರಿತು ಆಕ್ರೋಶ ವ್ಯಕ್ತಪಡಿಸಿದರು. ಈ ಸ್ವಾಮೀಜಿಗಳಿಗೆ ಸಮಾಜದ ಪ್ರತಿ ಸಮುದಾಯಕ್ಕೂ ಒಳಿತನ್ನೇ ಬಯಸುವ ಸಂವಿಧಾನದ ಅವಶ್ಯಕತೆಬೇಕಿಲ್ಲ. ವರ್ಣಾಶ್ರಮ, ತಾರತಮ್ಯ ಪೋಷಿಸುವ ಮನುಸ್ಮೃತಿಯೇ ಇವರಿಗೆ ಮುಖ್ಯ. ಹಾಗಾಗಿ ಸಂವಿಧಾನ ವಿರುದ್ಧ ಮಾತನಾಡದಂತೆ ಸರ್ಕಾರ ಕ್ರಮಕೈಗೊಳ್ಳಬೇಕು’ ಎಂದು ಆಗ್ರಹಿಸಿದರು. ಹೇಳಿದ್ದಾರೆ.
ಅಷ್ಟೇಅಲ್ಲದೆ ಅವರು ಈ ಸಂದರ್ಭದಲ್ಲಿ, ‘ಸಂವಿಧಾನ ರಕ್ಷಣೆ ನಿಟ್ಟಿನಲ್ಲಿ ಕಠಿಣ ಕ್ರಮಕೈಗೊಳ್ಳಬೇಕು. ಮನುವಾದಿಗಳ ಸಂಖ್ಯೆ ಹೆಚ್ಚದಂತೆ ನೋಡಿಕೊಳ್ಳಬೇಕು,’ ಎಂದು ಹೇಳಿದರು.
- Advertisement -


