Monday, June 15, 2026
Homeಕರಾವಳಿಕಾಸರಗೋಡುಕಾಸರಗೋಡು; ಪೊಲೀಸ್ ಸಿಬ್ಬಂದಿಯಾಗಿರುವ ತನ್ನ ಪತ್ನಿಯನ್ನು ಕೊಲೆಗೈದ ಪತಿ

ಕಾಸರಗೋಡು; ಪೊಲೀಸ್ ಸಿಬ್ಬಂದಿಯಾಗಿರುವ ತನ್ನ ಪತ್ನಿಯನ್ನು ಕೊಲೆಗೈದ ಪತಿ

- Advertisement -
- Advertisement -

ಕಾಸರಗೋಡು;   ಪೊಲೀಸ್ ಸಿಬ್ಬಂದಿಯಾಗಿರುವ ತನ್ನ ಪತ್ನಿಯನ್ನು ಪತಿಯೊಬ್ಬ ಕೊಲೆಗೈದ ಘಟನೆಕಾಸರಗೋಡಿನಲ್ಲಿ ಕಣ್ಣೂರಿನ ಕರಿವೆಳ್ಳೂರಿನಲ್ಲಿ ಗುರುವಾರ ಸಂಜೆಯ ನಡೆದಿದೆ. ಕಾಸರಗೋಡು ಚಂದೇರ ಪೊಲೀಸ್ ಠಾಣೆಯ ಮಹಿಳಾ ಪೊಲೀಸ್ ಸಿಬ್ಬಂದಿ ದಿವ್ಯಶ್ರೀ ಮೃತ ದುರ್ದೈವಿ. ಕೊಲೆ ಮಾಡಿ ಪರಾರಿಯಾಗಿದ್ದ ಪತಿ ರಾಜೇಶ್ ನನ್ನ ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ದಿವ್ಯಶ್ರೀ ಹಾಗೂ ರಾಜೇಶ್ ನಡುವೆ ಕೌಟುಂಬಿಕ ಕಲಹ ಉಂಟಾಗಿತ್ತು .ಇದರಿಂದ ಕೆಲ ದಿನಗಳಿಂದ ಇಬ್ಬರೂ ಪರಸ್ಪರ ದೂರವಾಗಿದ್ದರು. ಸಂಜೆಯ ವೇಳೆ ತಲವಾರು ಹಿಡಿದುಕೊಂಡು ಬಂದ ರಾಜೇಶ್ ದಿವ್ಯಶ್ರೀ ಮೇಲೆ ಹಲ್ಲೆ ನಡೆಸಿದ್ದು, ಇದರಿಂದ ಮುಖ ಹಾಗೂ ಕುತ್ತಿಗೆಗೆ ಗಂಭೀರ ಗಾಯವಾಗಿತ್ತು. ಈ ವೇಳೆ ತಡೆಯಲು ಬಂದ ತಂದೆಗೂ ಗಾಯ ಗಳಾಗಿವೆ. ಬೊಬ್ಬೆ ಕೇಳಿ ಸ್ಥಳೀಯರು ಬಂದಿದ್ದು, ಈ ವೇಳೆ ರಾಜೇಶ್ ಪರಾರಿಯಾಗಿದ್ದಾರೆ.

ಗಂಭೀರ ಗಾಯಗೊಂಡ ದಿವ್ಯಶ್ರೀ ಅವರನ್ನು ಪಯ್ಯನ್ನೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದರೂ ಜೀವ ಉಳಿಸಲಾಗಲಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ. . ಈ ಬಗ್ಗೆ ಇಲ್ಲಿನ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

- Advertisement -

Latest News

error: Content is protected !!