- Advertisement -
![]()
- Advertisement -
ಉಡುಪಿ : ಹೆಬ್ರಿ ತಾಲೂಕಿನ ಕಬ್ಬಿನಾಲೆಯ ಪಿತ್ತಬೈಲ್ ನಲ್ಲಿ ನಕ್ಸಲ್ ನಿಗ್ರಹ ದಳ ನಡೆಸಿದ ಎನ್ಕೌಂಟರ್ನಲ್ಲಿ ಬಲಿಯಾಗಿರುವ ನಕ್ಸಲ್ ಮುಖಂಡ ವಿಕ್ರಂ ಗೌಡನ ಶವ ಸಾಗಿಸುತ್ತಿದ್ದ ಆಂಬುಲೆನ್ಸ್ ಪಲ್ಟಿಯಾಗಿದೆ.
ಮೋಸ್ಟ್ ವಾಟೆಂಡ್ ನಕ್ಸಲ್ ನಾಯಕ 61 ಪ್ರಕರಣವಿರುವ ವಿಕ್ರಂ ಗೌಡ ಉಡುಪಿ ಜಿಲ್ಲೆಯ ಹೆಬ್ರಿ ತಾಲೂಕಿನ ಪಿತೇಬೈಲ್ ನಲ್ಲಿ ಪೊಲೀಸರ ಗುಂಡು ತಗುಲಿ ಸಾವನ್ನಪ್ಪಿದ್ದು, ಮರಣೋತ್ತರ ಪರೀಕ್ಷೆಯ ಬಳಿಕ ಆತನ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಯಿತು. ವಿಕ್ರಂ ಗೌಡ ಅವರ ಮೃತದೇಹವನ್ನು ಗ್ರಾಮಕ್ಕೆ ಸಾಗಿಸುತ್ತಿದ್ದ ವೇಳೆ ಆಂಬುಲೆನ್ಸ್ ರಾಷ್ಟ್ರೀಯ ಹೆದ್ದಾರಿ 169 Aಯಲ್ಲಿ ಪಲ್ಟಿಯಾಗಿದ್ದು, ನಂತರದಲ್ಲಿ ಆತನ ಮೃತ ದೇಹವನ್ನು ಬೇರೆ ವಾಹನದಲ್ಲಿ ತೆಗೆದುಕೊಂಡು ಹೆಬ್ರಿ ಬಳಿಯ ಕೂಡ್ಲು ಗ್ರಾಮಕ್ಕೆ ಅಂತ್ಯಸಂಸ್ಕಾರವನ್ನು ನಡೆಸಲು ಕೊಂಡೊಯ್ಯಲಾಯಿತು.
ವಿಕ್ರಂ ಗೌಡ ಅವರಿಗೆ ಕೂಡ್ಲು ಸಮೀಪ ಒಂದು ಎಕರೆ ಜಾಗವಿದ್ದು, ಅಲ್ಲೇ ಅಂತ್ಯಸಂಸ್ಕಾರವನ್ನು ನಡೆಸಲಾಯಿತು.
- Advertisement -


