Friday, June 5, 2026
Homeಕರಾವಳಿಮಂಗಳೂರುಬಂಟ್ವಾಳ;20 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯ ಸೆರೆ

ಬಂಟ್ವಾಳ;20 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯ ಸೆರೆ

- Advertisement -
- Advertisement -

ಬಂಟ್ವಾಳ; ಇಲ್ಲಿನ ಬಡಗಬೆಳ್ಳೂರು ಗ್ರಾಮದ ಶ್ರೀ ಆದಿಶಕ್ತಿ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ದಿನಾಂಕ 07.11.2004 ರಂದು ನಡೆದ ಕಳ್ಳತನ ಪ್ರಕರಣದಲ್ಲಿ ಆರೋಪಿತನಾಗಿ ಸುಮಾರು 20 ವರ್ಷಗಳಿಂದ ತಲೆಮರೆಸಿಕೊಂಡು ಕರ್ನಾಟಕದ ಹಲವೆಡೆ ಮತ್ತು ಕೇರಳ ರಾಜ್ಯದಲ್ಲಿ ಹಲವಾರು ಜಾಗದಲ್ಲಿ ವಿಳಾಸ ಬದಲಾವಣೆ ಮಾಡಿಕೊಂಡು ಬಂಧನಕ್ಕೆ ಸಿಗದೇ ತಲೆಮರೆಸಿಕೊಂಡಿದ್ದ ಪಾಣಾಜೆ ಗ್ರಾಮ, ಪುತ್ತೂರು ನಿವಾಸಿ ಮೊಹಮ್ಮದ್ ಶರೀಫ್ (44) ಎಂಬಾತನನ್ನು ದಿನಾಂಕ 06.11.2024   ರಂದು ಕೇರಳದ ಕಾಸರಗೋಡಿನಲ್ಲಿ ವಶಕ್ಕೆ ಪಡೆಯಲಾಗಿರುತ್ತದೆ. ಮಾನ್ಯ ನ್ಯಾಯಾಲಯವು ಆರೋಪಿಗೆ  ನ್ಯಾಯಾಂಗ ಬಂಧನ ವಿಧಿಸಿದ್ದು, ಸದ್ರಿ ಆರೋಪಿತನು ಇತ್ತೀಚಿಗೆ ಕೊಲೆ ಪ್ರಕರಣ ಒಂದರಲ್ಲಿ ಕೇರಳದ ಮಂಜೇಶ್ವರ ಠಾಣಾ ಪೊಲೀಸರಿಂದ ಬಂಧನಕ್ಕೆ ಒಳಗಾಗಿ ಬಳಿಕ ಜಾಮೀನಿನ ಮೇಲೆ ಬಿಡುಗಡೆ ಆಗಿರುತ್ತಾನೆ.

ಆರೋಪಿತನ ಪತ್ತೆ ಕಾರ್ಯದಲ್ಲಿ ಬಂಟ್ವಾಳ ಪೊಲೀಸ್ ಉಪಾಧೀಕ್ಷಕರಾದ ಶ್ರೀ ವಿಜಯಪ್ರಸಾದ್ ರವರ  ಮಾರ್ಗದರ್ಶನದಲ್ಲಿ ಬಂಟ್ವಾಳ ಗ್ರಾಮಾಂತರ ಠಾಣಾ ಪೊಲೀಸ್ ನಿರೀಕ್ಷಕರಾದ ಶಿವಕುಮಾರ್ ರವರ  ನೇತೃತ್ವದ, ಪಿಎಸ್ಐ ರವರುಗಳಾದ ಹರೀಶ್ ಎಂ ಆರ್ ಮತ್ತು ಮೂರ್ತಿ ಹಾಗೂ ಸಿಬ್ಬಂದಿಗಳಾದ  ಹರಿಶ್ಚಂದ್ರ ಮತ್ತು ಗಣೇಶ  ರವರ ತಂಡ ಕಾರ್ಯಚರಣೆ ನಡೆಸಿರುತ್ತದೆ.

- Advertisement -

Latest News

error: Content is protected !!