- Advertisement -
- Advertisement -
ಉಡುಪಿ: ತೆಂಗಿನ ಮರದಿಂದ ಜಾರಿ ಬಿದ್ದ ವ್ಯಕ್ತಿಯ ಕಾಲಿಗೆ ಗೇಟ್ ಸರಳು ಹೊಕ್ಕಿದ ಘಟನೆ ಉಡುಪಿಯಲ್ಲಿ ಸಂಭವಿಸಿದೆ.
ಉಡುಪಿ ತಾಲೂಕಿನ ಲಕ್ಷ್ಮೀಂದ್ರ ನಗರದಲ್ಲಿ ತೆಂಗಿನಕಾಯಿ ಕೀಳಲು ಮಂಜೇಗೌಡ (36) ಎಂಬವರು ತೆಂಗಿನ ಮರ ಏರಿದ್ದರು. ಈ ವೇಳೆ ಮಂಜೇಗೌಡ ಜಾರಿ ಕೆಳಗೆ ಬಿದ್ದಿದ್ದಾರೆ.
ನೆಲಕ್ಕೆ ಬಿದ್ದ ಸಂದರ್ಭದಲ್ಲಿ ತಡೆಗೋಡೆಯ ಗೇಟ್ ಸರಳು ಮಂಜೇಗೌಡ ಅವರ ಎಡಗಾಲಿಗೆ ಚುಚ್ಚಿ ಹೊರ ಬಂದಿದೆ. ಬಳಿಕ ಅಗ್ನಿಶಾಮಕ ದಳದಿಂದ ಗಾಯಾಳು ಮಂಜೇಗೌಡ ಅವರನ್ನು ರಕ್ಷಣೆ ಮಾಡಲಾಗಿದೆ.
ಗೇಟ್ ಸರಳು ಕತ್ತರಿಸಿ ನಂತರ ಗಾಯಾಳುವನ್ನು ಉಡುಪಿಯ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲು ಮಾಡಲಾಗಿದೆ.
- Advertisement -