ಬೆಳ್ತಂಗಡಿ; ಕೊಯ್ಯೂರು ಗ್ರಾಮದಲ್ಲಿ ಅರ್ಥಪೂರ್ಣ ದೀಪಾವಳಿ ಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಕೊಯ್ಯೂರು ಗ್ರಾಮದ ಅಂಬೇಡ್ಕರ್ ಭವನದಲ್ಲಿ ಹಿಂದೂ ಬಾಂಧವರಿಂದ ಮುಸ್ಲಿಂ ಮತ್ತು ಕ್ರೈಸ್ತ ಬಾಂಧವರಿಗೆ ಔತಣ ಕೂಟವನ್ನು ಏರ್ಪಡಿಸುವ ಮೂಲಕ ದೀಪಾವಳಿ ಸಂದೇಶವನ್ನು ಸಾರುವುದರೊಂದಿಗೆ ದೀಪಾವಳಿ ಹಬ್ಬವನ್ನು ಆಚರಿಸಲಾಯಿತು.
ಸಮಾರಂಭದ ಅಧ್ಯಕ್ಷತೆಯನ್ನು ಕೊಯ್ಯೂರು ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಮೋಹನ್ ಗೌಡ ವಹಿಸಿದ್ದರು ಎಸ್ ಡಿ ಎಂ ಕಾಲೇಜು ಉಜಿರೆ ಇದರ ಉಪನ್ಯಾಸಕರಾದ ದಿವ ಕೊಕ್ಕಡ ಮುಖ್ಯ ಅತಿಥಿಯಾಗಿ ಹಾಜರಿದ್ದರು. ಊರಿನ ಪ್ರಮುಖರಾದ ಗ್ರಾಮ ಪಂಚಾಯತ್ ಸದಸ್ಯ ಲೋಕೇಶ ಗೌಡ ಪಾಂಬೇಲು,ಉಜ್ವಲ್ ಗೌಡ ಪಾಂಬೆಲ, ದಿನೇಶ್ ಗೌಡ ಕೀನ್ಯಾಜೆ, ಕೊಯ್ಯೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಹರೀಶ್ ಗೌಡ, ಕೊಯ್ಯೂರು ಗ್ರಾಮ ಪಂಚಾಯತ್ ಕಾರ್ಯದರ್ಶಿ ಪರಮೇಶ್ವರ,ಕೇಶವ ಕೊಂಗುಜೆ, ಕೇಶವ ಕಂಗಿತ್ಲು, ಕೊಯ್ಯೂರು ಗ್ರಾಮ ಪಂಚಾಯತ್ ಸದಸ್ಯರಾದ ಲತಿಫ್ ಕುಮ್ಮೆರು,ಮನ್ಸಾರ್ ವಿದ್ಯಾಸಂಸ್ಥೆ ಪ್ರಾಂಶುಪಾಲರು ಮುಂತಾದ ಗಣ್ಯರ ವೇದಿಕೆಯಲ್ಲಿದ್ದು ಸಮಾಜಕ್ಕೆ ದೀಪಾವಳಿಯ ಸಂದೇಶವನ್ನು ಸಾರಿದರು ನಾವೆಲ್ಲರೂ ಮಾನವರು ಮಾನವರಾಗಿ ಬದುಕುವ ಎಲ್ಲಾ ಧರ್ಮದವರು ಎಲ್ಲಾ ಪಂಗಡದವರು ಒಂದಾಗಿ ಒಂದೇ ತಾಯಿಯ ಮಕ್ಕಳಂತೆ ಬಾಳಿ ಬದುಕೋಣ ಎನ್ನುತ್ತಾ ಮುಂದಿನ ಪೀಳಿಗೆಗೆ ಉತ್ತಮ ಸಮಾಜವನ್ನು ನಿರ್ಮಿಸಿ ಕೊಡೋಣ ಎಂದರು ದೇಶದ ಪ್ರಜೆಗಳಿಗಾಗಿ ಇಂಥ ಒಂದು ಉತ್ತಮ ಕಾರ್ಯಕ್ರಮ ಇಡೀ ರಾಜ್ಯಕ್ಕೆ ಮಾದರಿಯಾಗಲಿ ಎಂದು ಎಲ್ಲರೂ ಹಾರೈಸಿದರು.
ಈ ಸಂದರ್ಭದಲ್ಲಿ ನವೀನ್ ಗೌಡ ಕೊಯ್ಯೂರು. ಪ್ರವೀಣ್ ಗೌಡ ಮಾವಿನ ಕಟ್ಟೆ,ಸಿದ್ದಿಕ್ ಮಲೇಬೆಟ್ಟು, ಸಲೀಂ ಪಾತ್ರಲ, ಸುಜಿತ್ ಕುಮಾರ್, ಮಹಮ್ಮದ್ ಹಾರುನ್ ಉಪಸ್ಥಿತರಿದ್ದರು.