Saturday, June 6, 2026
Homeಆರಾಧನಾಭಕ್ತರಿಂದ ಗುರುವಾಯೂರು ದೇಗುಲದ ಶ್ರೀಕೃಷ್ಣನಿಗೆ ‘ತುಳಸಿ’ ಸಮರ್ಪಣೆ ನಿಷೇಧ 

ಭಕ್ತರಿಂದ ಗುರುವಾಯೂರು ದೇಗುಲದ ಶ್ರೀಕೃಷ್ಣನಿಗೆ ‘ತುಳಸಿ’ ಸಮರ್ಪಣೆ ನಿಷೇಧ 

- Advertisement -
- Advertisement -

ತಿರುವನಂತಪುರ: ಕೇರಳದ ಪ್ರಸಿದ್ಧ ಗುರುವಾಯೂರು ದೇವಸ್ಥಾನದಲ್ಲಿ ಶ್ರೀಕೃಷ್ಣನಿಗೆ ಪ್ರಿಯವಾದ “ತುಳಸಿ” ಸಮರ್ಪಿಸುವುದಕ್ಕೆ ನಿಷೇಧ ವಿಧಿಸಲಾಗಿದೆ.

ಭಕ್ತರು ತರುವ ತುಳಸಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕೀಟನಾಶಕ ಇರುವುದೇ  ಶ್ರೀಕೃಷ್ಣನಿಗೆ ತುಳಸಿ ಸಮರ್ಪಿಸಲು ನಿಷೇಧವಾಗುವುದಕ್ಕೆ ಮುಖ್ಯ ಕಾರಣ ಎಂದು ಹೇಳಲಾಗಿದೆ.   

ಇದರಿಂದಾಗ ದೇವಾಲಯದ ಸಿಬ್ಬಂದಿಗೆ ಅಲರ್ಜಿ ಮತ್ತು ತುರಿಕೆಯಂತಹ ಸಮಸ್ಯೆಗಳು ಉಂಟಾಗುತ್ತಿದ್ದು, ಈ ಕಾರಣದಿಂದಾಗಿಯೇ ಇಂತಹ ನಿರ್ಧಾರವನ್ನು ಕೈಗೊಳ್ಳಲಾಗಿದೆ. 

ಇನ್ನು ಬಹುತೇಕ ಭಕ್ತರು ಅಂಗಡಿಗಳಿಂದ ತುಳಸಿ ಖರೀದಿಸುತ್ತಿದ್ದು, ವ್ಯಾಪಾರಿಗಳು ತುಳಸಿಯನ್ನು ಹಾಳಾಗದಂತೆ ಕಾಯ್ದುಕೊಳ್ಳಲು ಹೆಚ್ಚಿನ ಪ್ರಮಾಣದಲ್ಲಿ ಕೀಟನಾಶಕವನ್ನು ಬಳಸುತ್ತಾರೆ. ಇದರಿಂದಾಗಿ, ದೇಗುಲಕ್ಕೆ ಅಗತ್ಯವಿರುವಷ್ಟು ಕೀಟನಾಶಕ ಬಳಸದೇ ಇರುವ ತುಳಸಿ ಖರೀದಿಸಲು ವ್ಯವಸ್ಥೆ ಮಾಡಲಾಗಿದೆ ಎಂದು ದೇಗುಲದ ಅಧಿಕಾರಿಗಳು ತಿಳಿಸಿದ್ದಾರೆ ಎನ್ನಲಾಗಿದೆ.

- Advertisement -

Latest News

error: Content is protected !!