Thursday, June 4, 2026
Homeಕರಾವಳಿಮಂಗಳೂರು; ಸ್ಯಾಂಡಲ್ ವುಡ್ ನಟ ದುನಿಯಾ ವಿಜಯ್ ಉಳ್ಳಾಲ ಕಲ್ಲಾಪು, ಬುರ್ದುಗೋಳಿ ಗುಳಿಗ-ಕೊರಗಜ್ಜ ಉದ್ಭವ ಶಿಲೆಯ...

ಮಂಗಳೂರು; ಸ್ಯಾಂಡಲ್ ವುಡ್ ನಟ ದುನಿಯಾ ವಿಜಯ್ ಉಳ್ಳಾಲ ಕಲ್ಲಾಪು, ಬುರ್ದುಗೋಳಿ ಗುಳಿಗ-ಕೊರಗಜ್ಜ ಉದ್ಭವ ಶಿಲೆಯ ಆದಿಸ್ಥಳಕ್ಕೆ ಭೇಟಿ

- Advertisement -
- Advertisement -

ಮಂಗಳೂರು; ಸ್ಯಾಂಡಲ್ ವುಡ್ ನಟ ದುನಿಯಾ ವಿಜಯ್ ಉಳ್ಳಾಲ ಕಲ್ಲಾಪು,ಬುರ್ದುಗೋಳಿ ಗುಳಿಗ-ಕೊರಗಜ್ಜ ಉದ್ಭವ ಶಿಲೆಯ ಆದಿಸ್ಥಳಕ್ಕೆ ಭೇಟಿ ನೀಡಿದರು.

ಈ ವೇಳೆ ಬುರ್ದುಗೋಳಿ ಸಾನಿಧ್ಯದಲ್ಲಿ ಪ್ರಾರ್ಥನೆ ಸಲ್ಲಿಸಿದರು. ಬುರ್ದುಗೋಳಿ ಕ್ಷೇತ್ರದ ಪರವಾಗಿ ದುನಿಯಾ ವಿಜಯ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಸಲಗ ಹಾಗೂ ಭೀಮ ಸಿನಿಮಾಗಳ ಯಶಸ್ಸಿನ ಬಳಿಕ ದುನಿಯಾ ವಿಜಯ್ ಚಿತ್ರದಲ್ಲಿ ವಿನಯ್‌ ರಾಜಕುಮಾರ್‌ ನಾಯಕರಾಗಿರುವ ಸಿಟಿ ಲೈಟ್ಸ್ ಸಿನಿಮಾಕ್ಕೆ ಆ್ಯಕ್ಷನ್ ಕಟ್ ಹೇಳಲಿದ್ದಾರೆ. ವಿಶೇಷ ಎಂದರೆ ಈ ಚಿತ್ರದ ಮೂಲಕ ವಿಜಯ್‌ ಅವರ ದ್ವಿತೀಯ ಪುತ್ರಿ ಮೋನಿಷಾ ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ಸಂಪೂರ್ಣ ಹೊಸ ತಂಡ ಕೆಲಸ ಮಾಡಲಿರುವುದು ಮತ್ತೊಂದು ವಿಶೇಷತೆ. ಈಗಾಗಲೇ ‘ಸಿಟಿ ಲೈಟ್ಸ್‌’ ಚಿತ್ರದ ಸ್ಕ್ರಿಪ್ಟ್ ಕೆಲಸ ಪೂರ್ಣಗೊಂಡಿದ್ದು, ಶೀಘ್ರದಲ್ಲೇ ಚಿತ್ರೀಕರಣ ಶುರುವಾಗಲಿದೆ. ಸದ್ಯಕ್ಕೆ ವಿಜಯ್‌ ಎರಡ್ಮೂರು ಚಿತ್ರಗಳಲ್ಲಿ ಬಿಝಿ ಇದ್ದಾರೆ. ಜಡೇಶ್‌ ನಿರ್ದೇಶನದ ಚಿತ್ರದ ಎರಡನೇ ಹಂತದ ಚಿತ್ರೀಕರಣ ಕೂಡ ಮುಗಿಯುತ್ತಿದ್ದು, ಶೀಘ್ರದಲ್ಲೇ ಸಿನಿಮಾ ಚಿತ್ರೀಕರಣ ಪೂರ್ಣಗೊಳ್ಳಲಿದೆ. ಈ ಚಿತ್ರಕ್ಕೆ ‘ರಾಚಯ್ಯ’ ಎಂದು ಹೆಸರಿಡಲಾಗಿದೆ ಎನ್ನಲಾಗಿದೆ ಬಳಿಕ ವೆಟ್ರಿವೇಲ್‌ (ತಂಬಿ) ನಿರ್ದೇಶನದಲ್ಲಿ ವಿಜಯ್‌ ನಾಯಕರಾಗಿ ನಟಿಸಲಿದ್ದಾರೆ. ಆದರೆ, ಇವೆಲ್ಲದರ ಜತೆಗೆ ಸದ್ಯದಲ್ಲೇ ‘ಸಿಟಿ ಲೈಟ್ಸ್‌’ ಸಿನಿಮಾ ಕೂಡ ಸೆಟ್ಟೇರಲು ರೆಡಿಯಾಗುತ್ತಿದೆ. ಈ ಎಲ್ಲಾ ಸಿನಿಮಾಗಳ ಕೆಲಸಗಳು ಒಟ್ಟೊಟ್ಟಿಗೆ ನಡೆಯಲಿವೆಯಂತೆ

- Advertisement -

Latest News

error: Content is protected !!