Saturday, June 6, 2026
Homeಕರಾವಳಿಸುಳ್ಯ: ಅಪಘಾತಕ್ಕೆ ಸಹಕಾರಿ ಸಂಸ್ಥೆಯ ಲೆಕ್ಕಿಗ ಬಲಿ

ಸುಳ್ಯ: ಅಪಘಾತಕ್ಕೆ ಸಹಕಾರಿ ಸಂಸ್ಥೆಯ ಲೆಕ್ಕಿಗ ಬಲಿ

- Advertisement -
- Advertisement -

ಸುಳ್ಯ: ಅಪಘಾತಕ್ಕೆ ಸಹಕಾರಿ ಸಂಸ್ಥೆಯ ಲೆಕ್ಕಿಗ ಬಲಿಯಾಗಿರುವ ಘಟನೆ ಸುಳ್ಯದ ಪೈಚಾರು – ಸೋಣಾಂಗೇರಿ ರಸ್ತೆಯ ಆರ್ತಾಜೆ ಎಂಬಲ್ಲಿ ನಡೆದಿದೆ.

ಎರಡು ವಾಹನಗಳ ನಡುವೆ ನಡೆದ  ಅಪಘಾತದಲ್ಲಿ ಸಹಕಾರಿ ಸಂಸ್ಥೆಯ ಉದ್ಯೊಗಿಯೋರ್ವ ಪ್ರಾಣ ಕಳಕೊಂಡ ದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನಲ್ಲಿ  ಸಂಭವಿಸಿದೆ. ಐವರ್ನಾಡು ಗ್ರಾಮದ ಪಾಲೆಪ್ಪಾಡಿ, ನಿವಾಸಿ ಐವರ್ನಾಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಲೆಕ್ಕಿಗ ಬೋಜಪ್ಪ (56) ಮೃತ ದುರ್ದೈವಿ.

ಸುಳ್ಯದಿಂದ ಎಲಿಮಲೆ ಕಡೆಗೆ ಹೋಗುತ್ತಿದ್ದ ಬುಲೆಟ್ ಹಾಗೂ ಐವರ್ನಾಡು ಸುಳ್ಯಕ್ಕೆ ಬರುತ್ತಿದ್ದ ಬೋಜಪ್ಪರ ಬೈಕ್‍ ಆರ್ತಾಜೆ ಎಂಬಲ್ಲಿ ಮುಖಾಮುಖಿ ಡಿಕ್ಕಿಯಾಗಿದೆ. ಡಿಕ್ಕಿ ರಭಸಕ್ಕೆ ಬೋಜಪ್ಪ ಅವರು ಗಂಭೀರ ಗಾಯಗೊಂಡು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಬುಲೆಟ್ ಬೈಕ್ ಸವಾರ ನೆಲ್ಲೂರು ಕೆಮ್ರಾಜೆ ಗ್ರಾಮದ ಮಂದ್ರಪ್ಪಾಡಿಯ ವಸಂತ ಮತ್ತು ಅರುಣ್ ಅವರಿಗೂ ಕೂಡ ಗಾಯಗಳಾಗಿದ್ದು, ಅವರು ಕೆವಿಜಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆಯಲ್ಲಿ ಎರಡೂ ಬೈಕ್ ಗಳು ಜಖಂಗೊಂಡಿವೆ. ಸುಳ್ಯ ಪೊಲೀಸರು ಘಟನಾ ಸ್ಥಳಕ್ಕೆ ಆಗಮಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.ಮೃತರು ಪತ್ನಿ, ಇಬ್ಬರು ಪುತ್ರರು, ಮೂವರು ಸಹೋದರರು, ಒಬ್ಬರು ಸಹೋದರಿಯನ್ನು ಅಗಲಿದ್ದಾರೆ.

- Advertisement -

Latest News

error: Content is protected !!