ಬೆಳ್ತಂಗಡಿ; ಉದ್ಯೋಗ ನೀಡೋದಾಗಿ ಹೇಳಿ ಟೆಲಿಗ್ರಾಂ ಆಯಪ್ ಮೂಲಕ 19 ಲಕ್ಷ ರೂಪಾಯಿ ವಂಚನೆ ಮಾಡಿರುವ ಘಟನೆ ಬೆಳ್ತಂಗಡಿಯ ಮಲೆಬೆಟ್ಟು ಕೊಯ್ಯೂರು ಗ್ರಾಮದಲ್ಲಿ ನಡೆದಿದೆ. ಇಲ್ಲಿನ ಕೋಡಿಮಾರು ಮನೆಯ ಅಮೃತೇಶ್ ಕುಮಾರ್ ಎಂಬರಿಗೆ ಟೆಲಿಗ್ರಾಂ ಆ್ಯಪ್ ಮೂಲಕ ಪರಿಚಯವಾದ ಯಾರೋ ಅಪರಿಚಿತರು ತಾತ್ಕಾಲಿಕ ನೆಲೆಯಲ್ಲಿ ಉದ್ಯೋಗ ನೀಡುವುದಾಗಿ ಅವರ ಬಾಬ್ತು ಮೊಬೈಲ್ ನಲ್ಲಿದ್ದ ಟೆಲಿಗ್ರಾಂ ಅಪ್ಲಿಕೇಶನ್ ಗೆ ಯಾರೋ ಅಪಚಿರಿತರು https://ecommerecboostbranding.Com ವೆಬ್ ಸೈಟ್ ನ ಲಿಂಕ್ ನ್ನು ಕಳುಹಿಸಿ ನೊಂದಾಯಿಸಿಕೊಂಡು ಆನ್ ಲೈನ್ ವಸ್ತುಗಳನ್ನು ಉತ್ತೇಜಿಸಿದಲ್ಲಿ ಸಂಬಳದ ರೂಪದಲ್ಲಿ ಖಾತೆಗೆ ಹಣ ಜಮಾ ಮಾಡಲಾಗುವುದೆಂದು ತಿಳಿಸಿದ್ದಾರೆ.
ಅಮೃತೇಶ್ ಕುಮಾರ್ ಅವರುವಂಚಕರ ಮಾರ್ಗದರ್ಶನದಂತೆ ಲಿಂಕ್ ನ್ನು ಓಪನ್ ಮಾಡಿ ನೋಂದಾಯಿಸಿ ಕೊಂಡು ಅವರು ನೀಡಿರುವ ಟಾಸ್ಕನ್ನು ಮುಂದುವರಿಸುತ್ತಾ ಹೋದಂತೆ, ಟಾಸ್ಕನ್ನು ಮುಕ್ತಾಯಗೊಳಿಸಲು ಠೇವಣಿ ರೂಪದಲ್ಲಿ ಹಣ ಸಂದಾಯ ಮಾಡಬೇಕಾಗಿ ಮತ್ತು ವಿಶೇಷ ಬೋನಸ್ ಲಭಿಸಿದಲ್ಲಿ ದೊರೆಯುವ ಬೋನಸ್ ಪಡೆಯಲು ಠೇವಣಿ ಹಣವನ್ನು ಮತ್ತೆ ಮತ್ತೆ ಪಾವತಿಸಲು ತಿಳಿಸಿದಂತೆ ಅವರ ವಿವಿಧ ಬ್ಯಾಂಕ್ ಖಾತೆಯಿಂದ ಅಪರಿಚಿತ ವ್ಯಕ್ತಿಯ ವಿವಿಧ ಬ್ಯಾಂಕ್ ಖಾತೆಗೆ ಒಟ್ಟು 19,90,442/- ರೂ ಹಣವನ್ನು ಹಂತ-ಹಂತವಾಗಿ ವರ್ಗಾಯಿಸಿದ್ದು, ಜಮಾ ಮಾಡಿದ ಹಣವನ್ನು ವಾಪಾಸ್ಸು ನೀಡದೇ ನಂಬಿಸಿ ಮೋಸ ಮಾಡಿ ವಂಚಿಸಿದ ಅಪರಿಚಿತರ ವಿರುದ್ಧ ಕಾನೂನು ಕ್ರಮ ಕೈಕೊಳ್ಳಬೇಕು ಎಂದು ಬೆಳ್ತಂಗಡಿ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.


