Wednesday, June 3, 2026
Homeಅಪರಾಧಕೋಲ್ಕತ್ತಾ ವೈದ್ಯೆಯ ಅತ್ಯಾಚಾರ ಪ್ರಕರಣ; ವೈದ್ಯೆಯ ಮೇಲೆ ಅತ್ಯಾಚಾರ ಎಸಗಿ ಕೊಂದಿದ್ದು ಸಂಜಯ್‌ ರಾಯ್:‌ ಸಿಬಿಐ ಚಾರ್ಜ್‌...

ಕೋಲ್ಕತ್ತಾ ವೈದ್ಯೆಯ ಅತ್ಯಾಚಾರ ಪ್ರಕರಣ; ವೈದ್ಯೆಯ ಮೇಲೆ ಅತ್ಯಾಚಾರ ಎಸಗಿ ಕೊಂದಿದ್ದು ಸಂಜಯ್‌ ರಾಯ್:‌ ಸಿಬಿಐ ಚಾರ್ಜ್‌ ಶೀಟ್‌ ಸಲ್ಲಿಕೆ

- Advertisement -
- Advertisement -

ನವದೆಹಲಿ: ಕೋಲ್ಕತ್ತಾದ ಆರ್‌ ಜಿ ಕರ್‌ ಆಸ್ಪತ್ರೆಯಟ್ರೈನಿ ವೈದ್ಯೆ ಅತ್ಯಾಚಾರ ಪ್ರಕರಣದಲ್ಲಿ ವೈದ್ಯೆಯ ಮೇಲೆ ಸಂಜಯ್‌ ರಾಯ್‌ ಅತ್ಯಾಚಾರ ಎಸಗಿ, ಕೊಲೆಗೈದಿದ್ದು ಎಂದು ಸಿಬಿಐ(CBI) ಸಲ್ಲಿಸಿರುವ ಆರೋಪಪಟ್ಟಿಯಲ್ಲಿ ತಿಳಿಸಿದೆ.

ಗುತ್ತಿಗೆ ಆಧಾರದಲ್ಲಿ ಕೋಲ್ಕತಾ ಪೊಲೀಸರು ಸಂಜಯ್‌ ರಾಯ್‌ ನನ್ನು ಕೆಲಸಕ್ಕೆ ಬಳಸಿಕೊಂಡಿದ್ದು, ಈತನೇ ವೈದ್ಯೆಯ ಮೇಲೆ ಅತ್ಯಾಚಾರ ನಡೆಸಿ ಕೊಂದಿರುವುದಾಗಿ ಸಿಬಿಐ ಸೋಮವಾರ (ಅ.07) ಸಲ್ಲಿಸಿರುವ ಆರೋಪಪಟ್ಟಿಯಲ್ಲಿ ಉಲ್ಲೇಖಿಸಿದೆ.

ಅತ್ಯಾಚಾರ ಮತ್ತು ಕೊಲೆ ಪ್ರಕರಣದ ತನಿಖೆಯನ್ನು ಕೇಂದ್ರ ತನಿಖಾ ದಳ ಸಿಬಿಐ ಎರಡು ತಿಂಗಳೊಳಗೆ ಪೂರ್ಣಗೊಳಿಸಿದ್ದು, ಇಂದು ಅಡಿಷನಲ್‌ ಚೀಫ್‌ ಜುಡಿಶಿಯಲ್‌ ಮ್ಯಾಜಿಸ್ಟ್ರೇಟ್‌ ಗೆ ಚಾರ್ಜ್‌ ಶೀಟ್‌ ವರದಿಯನ್ನು ಸಲ್ಲಿಸಿರುವುದಾಗಿ ವರದಿಯಾಗಿದೆ. ಟ್ರೈನಿ ವೈದ್ಯೆಯ ಶವ ಆಗಸ್ಟ್‌ 9ರಂದು ಆಸ್ಪತ್ರೆಯಲ್ಲಿ ಪತ್ತೆಯಾಗಿದ್ದು, ಈ ಘಟನೆಯು ಎಲ್ಲೆಡೆಯೂ ಆಕ್ರೋಶ, ಪ್ರತಿಭಟನೆ ವ್ಯಕ್ತವಾಗಿತ್ತು. ಪ್ರಕರಣದ ಬಗ್ಗೆ ಸಿಬಿಐ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಕೋರ್ಟ್‌ ನಿರ್ದೇಶನ ನೀಡಿತ್ತು.

ಕೋಲ್ಕತ್ತಾ ಪೊಲೀಸರು ಸಾರ್ವಜನಿಕ ಆಕ್ರೋಶ, ಪ್ರತಿಭಟನೆಗೆ ಮಣಿದು ಸಂಜಯ್‌ ರಾಯ್‌ ನನ್ನು ಬಂಧಿಸಿದ್ದು, ನಂತರ ಕೋಲ್ಕತ್ತಾ ಪೊಲೀಸರು ಪ್ರಕರಣದ ಕುರಿತ ಸಾಕ್ಷ್ಯ ಹಾಗೂ ಆರೋಪಿ ಸಂಜಯ್‌ ರಾಯ್‌ ನನ್ನು ಸಿಬಿಐಗೆ ಹಸ್ತಾಂತರಿಸಿದ್ದರು

- Advertisement -

Latest News

error: Content is protected !!