Thursday, March 27, 2025
Homeಕರಾವಳಿಭಾರೀ ಮಳೆಗೆ ಆಯತಪ್ಪಿ ನದಿಗೆ ಬಿದ್ದ ವ್ಯಕ್ತಿ; ಇಬ್ಬರು ಯುವಕರಿಂದ ವ್ಯಕ್ತಿಯ ರಕ್ಷಣೆ

ಭಾರೀ ಮಳೆಗೆ ಆಯತಪ್ಪಿ ನದಿಗೆ ಬಿದ್ದ ವ್ಯಕ್ತಿ; ಇಬ್ಬರು ಯುವಕರಿಂದ ವ್ಯಕ್ತಿಯ ರಕ್ಷಣೆ

spot_img
- Advertisement -
- Advertisement -


ವಿಟ್ಲ: ರವಿವಾರದಂದು ಸುರಿದ ಭಾರೀ ಮಳೆಗೆ ಇಲ್ಲಿನ ನದಿಗಳು ಉಕ್ಕಿ ಹರಿದಿದ್ದು, ವ್ಯಕ್ತಿಯೋರ್ವ ಈ ವೇಳೆಯಲ್ಲಿ ಆಯತಪ್ಪಿ ಹೊಳೆಗೆ ಬಿದ್ದಿದ್ದು, ಯುವಕರಿಬ್ಬರು ವ್ಯಕ್ತಿಯನ್ನು ರಕ್ಷಿಸಿ ಮಾನವೀಯತೆ ಮೆರೆದಿದ್ದಾರೆ.

70ರ ಹರೆಯದ ಉಮ್ಮರ್ ರಕ್ಷಿಸಲ್ಪಟ್ಟವರು. ಚೆಕ್ಕಿದಕಾಡು ನಿವಾಸಿಗಳಾದ ಅಶೋಕ್‌ ಸಿ.ಎಚ್. ಹಾಗೂ ಸುರೇಶ್ ಸಿ.ಎಚ್. ರಕ್ಷಣೆ‌ ಮಾಡಿದ ಯುವಕರು.

ವಿಟ್ಲದ ಸುರಂಬಡ್ಕದ ಕಿಂಡಿ ಅಣೆಕಟ್ಟು ಸೇತುವೆ ಬಳಿ ಸಂಜೆ ವೇಳೆ ವ್ಯಕ್ತಿಯೊಬ್ಬರು ಸೇತುವೆಯಲ್ಲಿ ಹೋಗುತ್ತಿದ್ದಾಗ ಆಯತಪ್ಪಿ ಒಕ್ಕೆತ್ತೂರು ಹೊಳೆಗೆ ಬಿದ್ದಿದ್ದಾರೆ. ಅಲ್ಲೇ ಇದ್ದಂತಹ ಯುವಕರು ಕೂಡಲೇ ಪ್ರವಾಹವನ್ನೂ ಲೆಕ್ಕಿಸದೆ ಹೊಳೆಗೆ ಹಾರಿ ಈಜಾಡಿಕೊಂಡು ಹೋಗಿ ವ್ಯಕ್ತಿಯನ್ನು ಅಪಾಯದಿಂದ ರಕ್ಷಿಸಿದ್ದಾರೆ.

ಇಬ್ಬರು ಯುವಕರು ಉಮ್ಮರ್ ಅವರು ಹೊಳೆಗೆ ಬೀಳುವುದನ್ನು ನೋಡಿದ ಕೂಡಲೇ ತಮ್ಮ ಪ್ರಾಣವನ್ನೂ ಲೆಕ್ಕಿಸದೆಹೊಳೆಗೆ ಹಾರಿ ಈಜಾಡಿಕೊಂಡು ಹೋಗಿ ಉಮ್ಮರ್ ಅವರನ್ನು ರಕ್ಷಿಸಿದ್ದಾರೆ. ಕೂಡಲೇ ಸ್ಥಳದಲ್ಲೇ ಇದ್ದ ಸ್ಥಳೀಯರು ಸಾಥ್ ಕೊಟ್ಟಿದ್ದಾರೆ.

ಸಾರ್ವಜನಿಕರಿಂದ ಯುವಕರ ಸಮಯಪ್ರಜ್ಞೆಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.

- Advertisement -
spot_img

Latest News

error: Content is protected !!