Wednesday, June 3, 2026
Homeಕರಾವಳಿಮಂಗಳೂರು : : ಮಾಜಿ ಶಾಸಕ ಮೊಯ್ದಿನ್ ಬಾವ ಅವರ ಸಹೋದರ ಮುಮ್ತಾಜ್ ಅಲಿ ದಿಢೀರ್...

ಮಂಗಳೂರು : : ಮಾಜಿ ಶಾಸಕ ಮೊಯ್ದಿನ್ ಬಾವ ಅವರ ಸಹೋದರ ಮುಮ್ತಾಜ್ ಅಲಿ ದಿಢೀರ್ ನಾಪತ್ತೆ ಪ್ರಕರಣಕ್ಕೆ ಟ್ವಿಸ್ಟ್;  ಪ್ರಕರಣದಲ್ಲಿ ಮಹಿಳೆಯ ಪಾತ್ರದ ಬಗ್ಗೆ ಅನುಮಾನ?

- Advertisement -
- Advertisement -

ಮಂಗಳೂರು : : ಮಾಜಿ ಶಾಸಕ ಮೊಯ್ದಿನ್ ಬಾವ ಅವರ ಸಹೋದರ ಮುಮ್ತಾಜ್ ಅಲಿ ದಿಢೀರ್ ನಾಪತ್ತೆ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಪ್ರಕರಣದಲ್ಲಿ ಮಹಿಳೆಯ ಪಾತ್ರದ ಬಗ್ಗೆ ಅನುಮಾನ ವ್ಯಕ್ತವಾಗಿದೆ.

ಹೌದು.. ಮುಮ್ತಾಜ್ ಅಲಿ ನಾಪತ್ತೆ ಹಿಂದೆ ಮಹಿಳೆಯ ಕೈವಾಡವಿದೆ ಎಂದು ಹೇಳಲಾಗುತ್ತಿದೆ. ಮಹಿಳೆಯ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆಗೆ ಮುಂದಾಗಿದ್ದಾರೆ ಎನ್ನಲಾಗುತ್ತಿದೆ. ಮಹಿಳೆಯಿಂದ ಮುಮ್ತಾಜ್ ಅಲಿಗೆ ನಿರಂತರವಾಗಿ ಬ್ಲಾಕ್ ಮೇಲ್ ಮಾಡಲಾಗುತ್ತಿತ್ತು. ಮದುವೆ ಆಗುವಂತೆ ಮುಮ್ತಾಜ್ ಗೆ ಮಹಿಳೆ ಪಿಡಿಸುತ್ತಿದ್ದಳು ಎಂಬ ಆರೋಪ ಕೇಳಿ ಬಂದಿದೆ

ಅಲ್ಲದೆ ಮಹಿಳೆಯ ಬ್ಲಾಕ್ ಮೆಲ್ ಗೆ ನಾಲ್ವರು ಸಹಕಾರ ಕೊಟ್ಟಿದ್ದಾರೆ. ಸುರತ್ಕಲ್ ಮೂಲದ ನಾಲ್ವರ ಬ್ಲಾಕ್ ಮೆಲ್ ಗೆ ಸಹಕಾರ ನೀಡಿರುವ ಗುಮಾನಿ ಎದ್ದಿದೆ. ಮಸೀದಿ ಕಮಿಟಿ ವಿಚಾರದಲ್ಲಿ ಮುಮ್ತಾಜ್ ನಾಲ್ವರ ಜೊತೆ ಗಲಾಟೆ ನಡೆಸಿದ್ದಾರೆ. ಈ ಹಿನ್ನೆಲೆಯಲ್ಲಿ ಇದೆ ವಿಚಾರಕ್ಕೆ ಗಲಾಟೆ ಕೋಪದಿಂದಲೇ ಮಹಿಳೆಯ ಜೊತೆ ಸೇರಿ ಬ್ಲಾಕ್ ಮೇಲ್ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

- Advertisement -

Latest News

error: Content is protected !!