Friday, November 8, 2024
Homeಕರಾವಳಿಸುಳ್ಯ; ಆರೋಗ್ಯ ತಪಾಸಣೆಗೆ ಕರೆ ತಂದ ಆರೋಪಿ ಪರಾರಿ

ಸುಳ್ಯ; ಆರೋಗ್ಯ ತಪಾಸಣೆಗೆ ಕರೆ ತಂದ ಆರೋಪಿ ಪರಾರಿ

spot_img
- Advertisement -
- Advertisement -

ಸುಳ್ಯ; ಆರೋಗ್ಯ ತಪಾಸಣೆಗೆ ಕರೆ ತಂದ ಆರೋಪಿ ಪರಾರಿಯಾಗಿರುವ ಘಟನೆ ಸುಳ್ಯದಲ್ಲಿ ನಡೆದಿದೆ. ಸಂಪಾಜೆಯ ಮನೆಯೊಂದರಿಂದ ದರೋಡೆ ನಡೆಸಿದ ಪ್ರಕರಣದಲ್ಲಿ ಆರೋಪಿಯಾಗಿದ್ದು ನ್ಯಾಯಾಲಯಕ್ಕೆ ಹಾಜರಾಗದೆ ತಪ್ಪಿಸಿಕೊಳ್ಳುತ್ತಿದ್ದ ತಮಿಳುನಾಡಿನ ಈ ವ್ಯಕ್ತಿಯನ್ನು ಪೋಲೀಸರು ತಮಿಳುನಾಡಿನಲ್ಲಿ ಹಿಡಿದು ಸುಳ್ಯಕ್ಕೆ ತಂದಿದ್ದರು.ಬಳಿಕ  ಅ.5ರ ಸಂಜೆ ಸುಳ್ಯದ ಸರಕಾರಿ ಆಸ್ಪತ್ರೆಗೆ ತಪಾಸಣೆಗೆ ಕರೆ ತಂದಿದ್ದ ವೇಳೆ ಪೋಲೀಸರ ಕೈಯಿಂದ ತಪ್ಪಿಸಿಕೊಂಡು ಓಡಿ ಹೋಗಿದ್ದಾನೆ. ಆತನನ್ನುಪತ್ತೆ ಹಚ್ಚಲು ಸಹಕರಿಸುವಂತೆ ಪೋಲೀಸರು ಸಾರ್ವಜನಿಕರಲ್ಲಿ ವಿನಂತಿಸಿಕೊಂಡಿದ್ದಾರೆ.

ಸುಳ್ಯದ ನ್ಯಾಯಾಲಯಕ್ಕೆ ಹಾಜರುಪಡಿಸುವ ಮೊದಲು ಆತನನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಬೇಕಾಗಿರುವುದರಿಂದ ಸಂಜೆ ಸರಕಾರಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಅಲ್ಲಿ ಒಬ್ಬರು ಪೋಲೀಸ್ ಕಾನ್ ಸ್ಟೇಬಲ್ ಚೀಟಿ ಮಾಡಿಸುತ್ತಿರುವಾಗ ತನ್ನನ್ನು ಹಿಡಿದುಕೊಂಡಿದ್ದ ಇನ್ನೊಬ್ಬ ಪೋಲೀಸ್ ಕಾನ್ ಸ್ಟೇಬಲ್ ರನ್ನು ದೂಡಿ ಹಾಕಿ ಆರೋಪಿ ಓಡಿಹೋಗಿದ್ದ. ತಕ್ಷಣ ಪೋಲೀಸರು ಆತನನ್ನು ಬೆನ್ನಟ್ಟಿದರೂ ಆರೋಪಿ ಓಡಿ ತಪ್ಪಿಸಿಕೊಂಡಿದ್ದ ಎನ್ನಲಾಗಿದೆ.

- Advertisement -
spot_img

Latest News

error: Content is protected !!