Friday, June 26, 2026
Homeಕರಾವಳಿಮಂಗಳೂರು: ಉದ್ಯಮಿ ಮುಮ್ತಾಜ್ ಆಲಿಯವರ ಶೋಧ ಕಾರ್ಯಾಚರಣೆಗೆ ಈಶ್ವರ್ ಮಲ್ಪೆ ಎಂಟ್ರಿ

ಮಂಗಳೂರು: ಉದ್ಯಮಿ ಮುಮ್ತಾಜ್ ಆಲಿಯವರ ಶೋಧ ಕಾರ್ಯಾಚರಣೆಗೆ ಈಶ್ವರ್ ಮಲ್ಪೆ ಎಂಟ್ರಿ

- Advertisement -
- Advertisement -

ಮಂಗಳೂರು: ನಾಪತ್ತೆಯಾಗಿರುವ ಮಾಜಿ‌ ಶಾಸಕ ಮೊಯ್ದಿನ್ ಬಾವಾ ಅವರ ಸೋದರ ಉದ್ಯಮಿ ಮುಮ್ತಾಜ್ ಆಲಿಯವರ ಶೋಧ ಕಾರ್ಯಾಚರಣೆಗಾಗಿ  ಮುಳುಗು ತಜ್ಞ ಈಶ್ವರ್ ಮಲ್ಪೆ ಎಂಟ್ರಿ ಕೊಟ್ಟಿದ್ದಾರೆ.ಮುಳುಗುತಜ್ಞ ಈಶ್ಚರ ಮಲ್ಪೆ ತಂಡ ಸೇರಿದಂತೆ ಹಲವು ರಕ್ಷಣಾ ತಂಡಗಳು ಶೋಧ ಕಾರ್ಯದಲ್ಲಿ ನಿರತವಾಗಿವೆ. ಇನ್ನು ಮುಮ್ತಾಜ್ ಸಹೋದಜರ ಮಾಜಿ ಶಾಸಕ ಮೊಯ್ದಿನ್ ಬಾವಾ ಸ್ಥಳದಲ್ಲೇ ಇದ್ದು ಶೋಧ ಕಾರ್ಯಾಚರಣೆಯನ್ನು ವೀಕ್ಷಿಸುತ್ತಿದ್ದಾರೆ.

ಒಂದು ಹಂತದ ಶೋಧ ಕಾರ್ಯಾಚರಣೆಯ ಬಳಿಕ ಮಾತನಾಡಿದ  ಮುಳುಗು ತಜ್ಞ ಈಶ್ವರ್ ಮಲ್ಪೆ ನಾವು ಏಳು ಜನ ಆಳಕ್ಕೆ ಮುಳುಗಿ ಕಾರ್ಯಾಚರಣೆ ನಡೆಸಿದ್ದೇವೆ, ಆದರೆ. ಸದ್ಯ  100 ಮೀಟರ್ ಸುತ್ತುತ್ತಾ ಹುಡುಕಾಟ ನಡೆಸಲಾಗಿದೆ. ಸೇತುವೆ ಆಳಕ್ಕೆ ಇಳಿದು ಹುಡುಕಾಟ ನಡೆಸಿದ್ದೇವೆ. ಸೇತುವೆ ಕಾಮಗಾರಿ ನಡೆಯುತ್ತಿದ್ದು ಕೆಳಗೆ ಕಬ್ಬಿಣದ ಸರಳು, ಸಿಮೆಂಟ್ ಚೀಲಗಳಿವೆ. ಕೆಳಗೆ ಕತ್ತಲೆ ಇರುವುದರಿಂದ ಕಾರ್ಯಾಚರಣೆಗೆ ತೊಡಕಾಗಿದೆ ಎಂದರು. ಒಂದು ವೇಳೆ ಅವರು ಇಲ್ಲಿ ಬಿದ್ದಿದ್ದರೆ ಇಲ್ಲೇ ಸಿಗಬೇಕು, ಇಷ್ಟು ಬೇಗ ಸಮುದ್ರ ಸೇರುವುದಿಲ್ಲ. ಎಲ್ಲಾ ತಂಡಗಳು ಕಾರ್ಯಾಚರಣೆಯನ್ನು ಮತ್ತೆ ಮುಂದುವರೆಸಿದ್ದೇವೆ. ಅವರು ಜೀವಂತವಾಗಿ ಇರಲಿ ಎಂದು ಆಶೀಸುತ್ತೇವೆ ಎಂದಿದ್ದಾರೆ.

ಸ್ಥಳಕ್ಕೆ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಅಲಿ ಅವರ ಸಹೋದರ ಬಿ.ಎಂ ಫಾರೂಕ್, ಐವನ್ ಡಿಸೋಜ ಭೇಟಿ ನೀಡಿದ್ದಾರೆ.

- Advertisement -

Latest News

error: Content is protected !!