Sunday, June 7, 2026
Homeಕರಾವಳಿಮಂಗಳೂರುಮಂಗಳೂರು : ಲೋಕಾ ಬಲೆಗೆ ಬಿದ್ದ ಮುಖ್ಯಾಧಿಕಾರಿ ಮನೆಯಲ್ಲಿ ಹಣ ಪತ್ತೆ: ಮುಖ್ಯಾಧಿಕಾರಿ ವಿರುದ್ಧ ಎರಡನೇ...

ಮಂಗಳೂರು : ಲೋಕಾ ಬಲೆಗೆ ಬಿದ್ದ ಮುಖ್ಯಾಧಿಕಾರಿ ಮನೆಯಲ್ಲಿ ಹಣ ಪತ್ತೆ: ಮುಖ್ಯಾಧಿಕಾರಿ ವಿರುದ್ಧ ಎರಡನೇ ಪ್ರಕರಣ ದಾಖಲು

- Advertisement -
- Advertisement -

ಮಂಗಳೂರು; ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ಕಿನ್ನಿಗೋಳಿಯಲ್ಲಿ ನಡೆದಿದೆ. ಎಂ.ಆರ್ ಸ್ವಾಮಿ ಲೋಕಾಯುಕ್ತ ಬಲೆಗೆ ಬಿದ್ದ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ.

ಎಂ.ಆರ್ ಸ್ವಾಮಿ, ಕಿನ್ನಿಗೋಳಿ ಪಟ್ಟಣ ಪಂಚಾಯತ್ ನ ಮುಖ್ಯಾಧಿಕಾರಿಯಾಗಿದ್ದು, ಇವರ ಮನೆಯನ್ನು ಶೋಧನೆ ಮಾಡಿದಾಗ ವಿದ್ಯುತ್ ಗುತ್ತಿಗೆದಾರರೊಬ್ಬರ ಸಂಸ್ಥೆಯ ಹೆಸರಿರುವ ಎನ್‌ವಲಪ್ ಕವರಿನಲ್ಲಿ ರೂ 30,000/- ಹಣ ಪತ್ತೆಯಾಗಿದ್ದು, ಈ ಬಗ್ಗೆ ತನಿಖೆ ಕೈಗೊಂಡಾಗ ಸದರಿ ಹಣವನ್ನು 3 ವಿದ್ಯುತ್ ಕಾಮಗಾರಿಗಳ ಬಿಲ್ ಪಾಸ್ ಮಾಡಿರುವುದಕ್ಕೆ ಶ್ರೀ ಎಂ.ಆರ್ ಸ್ವಾಮಿ, ಮುಖ್ಯಾಧಿಕಾರಿಗಳು, ಕಿನ್ನಿಗೋಳಿ ಪಟ್ಟಣ ಪಂಚಾಯತ್, ಮುಲ್ಕಿ ತಾಲೂಕು ಇವರು ಲಂಚವಾಗಿ ತನ್ನಿಂದ ಪಡೆದುಕೊಂಡಿರುತ್ತಾರೆ.

 ವಿದ್ಯುತ್ ಗುತ್ತಿಗೆದಾರರು ನೀಡಿದ ದೂರಿನ ಆಧಾರದ ಮೇಲೆ ಮಂಗಳೂರು ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 06/2024 ಕಲಂ 7(ಎ) ಭ್ರಷ್ಟಾಚಾರ ನಿರ್ಬಂಧಕ ಕಾಯ್ದೆ, 1988 (ತಿದ್ದುಪಡಿ ಕಾಯ್ದೆ, 2018) ರಡಿ ದಿನಾಂಕ 04. 10.2024 ರಂದು ಪ್ರಕರಣ ದಾಖಲಾಗಿ ತನಿಖೆಯಲ್ಲಿರುತ್ತದೆ ಎಂಬುದಾಗಿ ಎಂ.ಎ ನಟರಾಜ ಪೊಲೀಸ್ ಅಧೀಕ್ಷಕರು, ಕರ್ನಾಟಕ ಲೋಕಾಯುಕ್ತ, ಮಂಗಳೂರು ರವರು ತಿಳಿಸಿರುತ್ತಾರೆ.

- Advertisement -

Latest News

error: Content is protected !!