Saturday, June 6, 2026
Homeಕರಾವಳಿಬೆಳ್ತಂಗಡಿ : ಲಾಯಿಲ ಗ್ರಾಮದ 1ನೇ ವಾರ್ಡ್ ನ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ರೋಹಿತ್ ರಾಯನ್...

ಬೆಳ್ತಂಗಡಿ : ಲಾಯಿಲ ಗ್ರಾಮದ 1ನೇ ವಾರ್ಡ್ ನ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ರೋಹಿತ್ ರಾಯನ್ ಡಿಸೋಜ ನಿಧನ

- Advertisement -
- Advertisement -

ಬೆಳ್ತಂಗಡಿ :  ಲಾಯಿಲ ಗ್ರಾಮದ ಒಂದನೇ ವಾರ್ಡ್ ನ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿದ್ದ , ಯುವ ನಾಯಕ ಕೊರತ್ತಿಕಜೆ ನಿವಾಸಿ ರೋಹಿತ್ ರಾಯನ್ ಡಿಸೋಜ (40) ಅವರು ಅಲ್ಪಕಾಲದ ಅಸೌಖ್ಯದಿಂದ ಆ.5 ರಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

ಮೃತರು ಅವಿವಾಹಿತರಾಗಿದ್ದು , ಪಿಡ್ಲೂಡಿ ಇಲಾಖೆಯ ನಿವೃತ್ತ ಉದ್ಯೋಗಿಯಾಗಿದ್ದ ದಿವಂಗತ ಅಲ್ಪೋನ್ಸ್ ಡಿಸೋಜ ಅವರ ಪುತ್ರ. ಮೃತರು ಸಹೋದರಿ , ವಿದೇಶದಲ್ಲಿ ಉದ್ಯೋಗದಲ್ಲಿರುವ ರೇಷ್ಮಾ ಡಿಸೋಜ ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಹಿ.ಪ್ರಾ ಶಾಲೆ ಪಡ್ಲಾಡಿ ಲಾಯಿಲ ಇಲ್ಲಿನ ಹಳೆ ವಿದ್ಯಾರ್ಥಿಯಾಗಿದ್ದ ರೋಹಿತ್ ರವರ ನಿಧನಕ್ಕೆ ಹಳೆ ವಿದ್ಯಾರ್ಥಿ ಸಂಘ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಿದೆ. ಅವರ ಅಂತಿಮ ಕಾರ್ಯಕ್ರಮ ಸೋಮವಾರ ಬೆಳಗ್ಗೆ 10 ಘಂಟೆಗೆ ಬೆಳ್ತಂಗಡಿ ಕೇಂದ್ರ ಚರ್ಚ್ ನಲ್ಲಿ ನಡೆಯಲಿದೆ.

- Advertisement -

Latest News

error: Content is protected !!