Thursday, June 4, 2026
Homeಕರಾವಳಿಅಕ್ಟೋಬರ್ 4ರಿಂದ ಮಂಗಳೂರಿನಲ್ಲಿ ಅಂತರಾಷ್ಟ್ರೀಯ ವಿದೂಷಕ ಉತ್ಸವ

ಅಕ್ಟೋಬರ್ 4ರಿಂದ ಮಂಗಳೂರಿನಲ್ಲಿ ಅಂತರಾಷ್ಟ್ರೀಯ ವಿದೂಷಕ ಉತ್ಸವ

- Advertisement -
- Advertisement -

ಮಂಗಳೂರು: 10 ದೇಶಗಳ 25 ವಿದೂಷಕರೊಂದಿಗೆ 120 ನಿಮಿಷಗಳ ಕಾಲ ನಡೆಯುವ ನಿರಂತರ ಹಾಸ್ಯ, ಕಾಮಿಡಿ, ಜಗ್ಲಿಂಗ್ ಮತ್ತು ಸಂಗೀತದ ಅದ್ಭುತ ಕಾರ್ಯಕ್ರಮವು 2024ರ ಅಕ್ಟೋಬರ್ 4 ರಿಂದ 6 ರವರೆಗೆ, ಬೆಳಿಗ್ಗೆ 11, ಮಧ್ಯಾಹ್ನ 3 ಮತ್ತು ಸಾಯಂಕಾಲ 7 ಗಂಟೆಗೆ ಫಾದರ್ ಮುಲ್ಲರ್ ಕನ್ವೆನ್ಷನ್ ಸೆಂಟರ್, ಮಂಗಳೂರಿನಲ್ಲಿ ನಡೆಯಲಿದೆ.

ಆಕರ್ಷಕ ಕಾರ್ಯಾಗಾರಗಳು ಮತ್ತು ವೈವಿಧ್ಯಮಯ ಚಟುವಟಿಕೆಗಳು ಮತ್ತು ಪ್ರಶಸ್ತಿ ವಿಜೇತ ವಿದೂಷಕರ ತಂಡದಿಂದ ನಗು ಮತ್ತು ಮನರಂಜನೆಯಿಂದ ತುಂಬಿದ ಕಾರ್ಯಕ್ರಮವು ಅಂತರಾಷ್ಟ್ರೀಯ ವಿದೂಷಕರ ಉತ್ಸವದ 10ನೇ ವಾರ್ಷಿಕೋತ್ಸವದಲ್ಲಿ ನಡೆಯಲಿದೆ. ಈ ಹಬ್ಬವನ್ನು ಪ್ರಶಸ್ತಿ ವಿಜೇತ ಅಂತಾರಾಷ್ಟ್ರೀಯ ವಿದೂಷಕ ಕಲಾವಿದ, ವರ್ಲ್ಡ್ ಕ್ಲೌನ್ ಎಸೋಸಿಯೇಶನ್ ಮಾಜಿ ಉಪಾಧ್ಯಕ್ಷ ಮತ್ತು ಅಂತಾರಾಷ್ಟ್ರೀಯ ಕ್ಲೌನ್ ಆಫ್ ದಿ ಇಯರ್ ಪ್ರಶಸ್ತಿಯ ವಿಜೇತರಾದ ಮಾರ್ಟಿನ್ ಫ್ಲಬ್ಬರ್ ಡಿಸೋಜಾ ಇವರು ನಿರ್ವಹಿಸಲಿದ್ದಾರೆ. ಫ್ಲಬ್ಬರ್ ಅವರು 7 ದೇಶಗಳಲ್ಲಿನ ದೊಡ್ಡ ಹಾಸ್ಯ ಸ್ಟೇಜ್‌ಗಳಲ್ಲಿ ಪ್ರದರ್ಶನ ನೀಡಿದ್ದಾರೆ, ಮತ್ತು ಈಗ ಅವರು ಮಂಗಳೂರಿನಲ್ಲಿ ಅಂತಾರಾಷ್ಟ್ರೀಯ ಮನರಂಜನೆ ಅನುಭವವನ್ನು ನೀಡಲಿದ್ದಾರೆ. ಅಷ್ಟೇಅಲ್ಲದೆ ಈ ವರ್ಷದ ಕಾರ್ಯಕ್ರಮವು 10 ಪ್ರತಿಭಾವಂತ ಮಹಿಳಾ ವಿದೂಷಕಕ ಕಲಾವಿದರನ್ನು ಪ್ರಸ್ತುತಪಡಿಸುವ ಮೂಲಕ, ಈ ಕಲೆಯಲ್ಲಿ ಮಹಿಳೆಯರ ಕೊಡುಗೆಯನ್ನು ಪ್ರತಿಬಿಂಬಿಸುತ್ತಿದೆ.

ಈ ಕಾರ್ಯಕ್ರಮವು ಯುಎಸ್ಎ, ಕೆನಡಾ, ಬ್ರೆಜಿಲ್, ಪೆರು, ಅರ್ಜೆಂಟೀನಾ, ಇಟಲಿ, ಫ್ರಾನ್ಸ್, ಜರ್ಮನಿ, ರಷ್ಯಾ, ಸ್ಪೇನ್ ಮತ್ತು ಭಾರತ ಮುಂತಾದ ರಾಷ್ಟ್ರಗಳ ಅಂತಾರಾಷ್ಟ್ರೀಯ ವಿದೂಷಕ ಕಲಾವಿದರ ಸಮಾವೇಶವಾಗಿದೆ. 

- Advertisement -

Latest News

error: Content is protected !!