Friday, June 5, 2026
Homeಕರಾವಳಿಪುತ್ತೂರು :ಸಹಾಯಕ ಉಪನಿರೀಕ್ಷಕ ಸುರೇಶ ರೈ ರಾಜ್ಯ ಗುಪ್ತವಾರ್ತೆ ವಿಭಾಗಕ್ಕೆ ವರ್ಗಾವಣೆ

ಪುತ್ತೂರು :ಸಹಾಯಕ ಉಪನಿರೀಕ್ಷಕ ಸುರೇಶ ರೈ ರಾಜ್ಯ ಗುಪ್ತವಾರ್ತೆ ವಿಭಾಗಕ್ಕೆ ವರ್ಗಾವಣೆ

- Advertisement -
- Advertisement -

ಪುತ್ತೂರು: ಸಂಪ್ಯ ಪೊಲೀಸ್ ಠಾಣಾ ವ್ಯಾಪ್ತಿಯ ಈಶ್ವರಮಂಗಲ ಹೊರಠಾಣೆಯಲ್ಲಿ ಸಹಾಯಕ ಉಪನಿರೀಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಸುರೇಶ್ ರೈ ಅವರು ರಾಜ್ಯ ಗುಪ್ತವಾರ್ತೆ ಇಲಾಖೆಗೆ ವರ್ಗಾವಣೆಗೊಂಡಿದ್ದಾರೆ. ಜು.8ರಂದು ಈಶ್ವರಮಂಗಲ ಹೊರಠಾಣೆಯಿಂದ ಕರ್ತವ್ಯದಿಂದ ಬಿಡುಗಡೆಗೊಂಡ ಅವರು ಜು.10ರಂದು ಗುಪ್ತ ವಾರ್ತೆ ಇಲಾಖೆಯಲ್ಲಿ ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಗುಪ್ತ ವಾರ್ತೆ ವಿಭಾಗವು ಪುತ್ತೂರು, ಸುಳ್ಯ ಹಾಗೂ ಕಡಬ ತಾಲೂಕುಗಳನ್ನೊಂಡಿದೆ. ಕಳೆದ 31 ವರ್ಷಗಳಿಂದ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸುರೇಶ್ ರೈ ಅವರು 17 ವರ್ಷ ಪುತ್ತೂರು ಎಎಸ್‌ಪಿ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸಿದ್ದರು. ಮಂಗಳೂರು ಟ್ರಾಫಿಕ್ ಈಸ್ಟ್ ಠಾಣೆಯಲ್ಲಿ 4 ವರ್ಷಗಳ ಕಾಲ ಕರ್ತವ್ಯ ನಿರ್ವಹಿಸಿದ್ದರು. ನಾಲ್ಕೂವರೆ ವರ್ಷಗಳ ಕಾಲ ಮಂಗಳೂರು ಮೆಸ್ಕಾಂ ವಿಜಿಲೆನ್ಸ್‌ನಲ್ಲಿ ಹೆಡ್‌ಕಾನ್‌ಸ್ಟೇಬಲ್ ಆಗಿ ಸೇವೆ ಸಲ್ಲಿಸಿದ್ದ ಅವರು ಬಳಿಕ ಸುಳ್ಯ ಪೊಲೀಸ್ ಠಾಣೆಗೆ ಎಎಸ್ಸೈ ಆಗಿ ಬಡ್ತಿ ಹೊಂದಿದ್ದರು. ಆ ಬಳಿಕ ಸಂಪ್ಯ ಪೊಲೀಸ್ ಠಾಣೆಯಲ್ಲಿ ಹಾಗೂ ಈಶ್ವರಮಂಗಲ ಹೊರಠಾಣೆಯಲ್ಲಿ ಮೂರೂವರೆ ವರ್ಷಗಳ ಕಾಲ ಎಎಸ್ಸೈ ಆಗಿ ಕರ್ತವ್ಯ ನಿರ್ವಹಿಸಿದ್ದರು
ಪ್ರಸ್ತುತ ಪುತ್ತೂರು ಕೊಡಿಪ್ಪಾಡಿ ರಸ್ತೆಯಲ್ಲಿರುವ ಕಾರ್ಜಾಲು ಕುಂಕುಮ ಆರ್ಕೆಡ್‌ನಲ್ಲಿ ವಾಸ್ತವ್ಯ ಹೊಂದಿರುವ ಇವರು ಪತ್ನಿ ವನಜಾಕ್ಷಿ ರೈ ಹಾಗೂ ಪುತ್ರಿ ನೆಹರುನಗರ ವಿವೇಕಾನಂನ ಕಾಲೇಜಿನ ಬಿಎಸ್ಸಿ ಅಂತಿವ ವರ್ಷದ ವಿದ್ಯಾರ್ಥಿನಿ ಪರೀಕ್ಷಾ ರೈ ಅವರೊಂದಿಗೆ ಸಂತೃತ್ಪ ಜೀವನ ಸಾಗಿಸುತ್ತಿದ್ದಾರೆ.

- Advertisement -

Latest News

error: Content is protected !!