Saturday, June 13, 2026
Homeಕರಾವಳಿಉಡುಪಿಕಾರ್ಕಳ: ಶಾಂಭವಿ ಹೊಳೆಗೆ ಬಿದ್ದು ಬಾಲಕ ಸಾವು

ಕಾರ್ಕಳ: ಶಾಂಭವಿ ಹೊಳೆಗೆ ಬಿದ್ದು ಬಾಲಕ ಸಾವು

- Advertisement -
- Advertisement -

ಕಾರ್ಕಳ: ಶಾಂಭವಿ ಹೊಳೆಗೆ ಬಿದ್ದು ಬಾಲಕ ಸಾವನ್ನಪ್ಪಿರುವ ಘಟನೆ ಕಾರ್ಕಳದ ಇರ್ವತ್ತೂರಿನಲ್ಲಿ ನಡೆದಿದೆ.

ಸಾಣೂರು ಹೈಸ್ಕೂಲಿನ 9ನೇ ತರಗತಿಯ ವಿದ್ಯಾರ್ಥಿ ಚರಣ್ ರಾಜ್ (15) ಮೃತ ಬಾಲಕ. ಹೊಳೆಯಲ್ಲಿ ಮೀನು ಹಿಡಿಯುತ್ತಿರುವಾಗ ಈತ ಹೊಳೆಗೆ ಬಿದ್ದಿದ್ದಾನೆ. ತಕ್ಷಣವೇ ರಕ್ಷಿಸಿ ಸರಕಾರಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಅಷ್ಟರಲ್ಲಿ ಚರಣ್ ರಾಜ್ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ. 

ಈ ಕುರಿತು ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ವಿಚಾರಣೆ ನಡೆಸಿದ್ದಾರೆ.

- Advertisement -

Latest News

error: Content is protected !!