Thursday, June 4, 2026
Homeಕರಾವಳಿಉಡುಪಿಉಡುಪಿ: ಮೀನುಗಾರಿಕಾ ಬಲೆಗೆ ಬಿದ್ದ ಬೃಹತ್ ಕಡಲಾಮೆಗಳು; ಮರಳಿ ಸಮುದ್ರಕ್ಕೆ ಬಿಟ್ಟ ಮೀನುಗಾರರು

ಉಡುಪಿ: ಮೀನುಗಾರಿಕಾ ಬಲೆಗೆ ಬಿದ್ದ ಬೃಹತ್ ಕಡಲಾಮೆಗಳು; ಮರಳಿ ಸಮುದ್ರಕ್ಕೆ ಬಿಟ್ಟ ಮೀನುಗಾರರು

- Advertisement -
- Advertisement -

ಉಡುಪಿ: ಮೀನುಗಾರಿಕೆ ವೇಳೆ ಬೃಹತ್ ಕಡಲಾಮೆಗಳು ಬಲೆಗೆ ಬಿದ್ದಿದ್ದು, ಬಳಿಕ ಮೀನುಗಾರರು ಆಮೆಗಳನ್ನು ಬಲೆಯಿಂದ ಬಿಡಿಸಿ ವಾಪಸ್ ಸಮುದ್ರಕ್ಕೆ ಬಿಟ್ಟಿದ್ದಾರೆ.

ಕುಂದಾಪುರ ತಾಲೂಕಿನ ಎಂ ಕೋಡಿ ಸಮುದ್ರ ತೀರದಲ್ಲಿ ದೋಣಿಯಲ್ಲಿ ಮೀನುಗಾರಿಕೆ ಮಾಡುತ್ತಿದ್ದ ವೇಳೆ
ಮೀನುಗಾರರ ಕೈರಂಪಣಿ ಬಲೆಗೆ ಎರಡು ಕಡಲಾಮೆಗಳು ಬಿದ್ದಿವೆ.

ನಲುವತ್ತು ಕೆಜಿ ಮತ್ತು ಇಪ್ಪತ್ತು ಕೆಜಿ ತೂಕದ ಎರಡು ಕಡಲಾಮೆಗಳು ಬಲೆ ಸಿಲುಕಿದ್ದು, ಮೀನುಗಾರರು ಬಲೆಯನ್ನು ಮೇಲಕ್ಕೆತ್ತಿದಾಗ ಕಡಲಾಮೆಗಳು ಸಿಕ್ಕಿಹಾಕಿಕೊಂಡಿರುವುದು ಗಮನಕ್ಕೆ ಬಂದಿದೆ.

ತಕ್ಷಣ ಕಾರ್ಯಪ್ರವೃತ್ತರಾದ ಮೀನುಗಾರರು ಬಲೆಯಿಂದ ಎರಡೂ ಕಡಲಾಮೆಗಳನ್ನು ಬಿಡಿಸಿ ಸಮುದ್ರಕ್ಕೆ ಬಿಟ್ಟಿದ್ದಾರೆ.

- Advertisement -

Latest News

error: Content is protected !!