Friday, June 5, 2026
Homeತಾಜಾ ಸುದ್ದಿಆಗುಂಬೆ ಘಾಟಿಯಲ್ಲಿ ಟ್ರಾಫಿಕ್ ಜಾಮ್; ವಾಹನವೊಂದರ ಬ್ರೇಕ್ ಫೇಲ್ ಆಗಿ ಆಂಬ್ಯುಲೆನ್ಸ್ ಓಡಾಟಕ್ಕೆ ಪರದಾಟ

ಆಗುಂಬೆ ಘಾಟಿಯಲ್ಲಿ ಟ್ರಾಫಿಕ್ ಜಾಮ್; ವಾಹನವೊಂದರ ಬ್ರೇಕ್ ಫೇಲ್ ಆಗಿ ಆಂಬ್ಯುಲೆನ್ಸ್ ಓಡಾಟಕ್ಕೆ ಪರದಾಟ

- Advertisement -
- Advertisement -

ತೀರ್ಥಹಳ್ಳಿ: ಆಗುಂಬೆ ಘಾಟಿಯಲ್ಲಿ ವಾಹನವೊಂದರ ಬ್ರೇಕ್ ಫೇಲ್ ಆದ ಕಾರಣದಿಂದಾಗಿ ಉಳಿದ ಎಲ್ಲಾ ವಾಹನ ಗಳ ಓಡಾಟಕ್ಕೆ ತೊಂದರೆಯಾಗಿದ್ದು, ಇದರಿಂದಾಗಿ ಸಂಪೂರ್ಣ ಟ್ರಾಫಿಕ್ ಆಗಿರುವ ಘಟನೆ ಗುರುವಾರದಂದು ನಡೆದಿದೆ.

ಉಡುಪಿ ಕಡೆಯಿಂದ ತೀರ್ಥಹಳ್ಳಿ ಕಡೆಗೆ ಬರುವ ವಾಹನಗಳು ಹಾಗೂ ತೀರ್ಥಹಳ್ಳಿ ಭಾಗದಿಂದ ಉಡುಪಿ ಕಡೆಗೆ ಹೋಗುವಂತಹ ವಾಹನಗಳು ಅರ್ಧಗಂಟೆಗೂ ಹೆಚ್ಚು ಕಾಲದಿಂದ ನಿಂತಲ್ಲಿಯೇ ನಿಂತಿದ್ದು, ವಾಹನ ಸವಾರರು ಪರದಾಟ ನಡೆಸಬೇಕಾಯಿತು.

ಈ ಟ್ರಾಫಿಕ್ ನಡುವೆಯೇ ಆಂಬ್ಯುಲೆನ್ಸ್ ಗಳು ಕೂಡ ಓಡಾಟ ನಡೆಸಲು ಪರದಾಟ ನಡೆಸಬೇಕಾಯಿತು. ಸ್ಥಳಕ್ಕೆ ಪೊಲೀಸರು ಆಗಮಿಸಿ ವಾಹನ ಓಡಾಟಕ್ಕೆ ಅನುವು ಮಾಡಿ ಕೊಡಲು ಹರ ಸಾಹಸ ಪಟ್ಟರು.

- Advertisement -

Latest News

error: Content is protected !!