Thursday, June 4, 2026
Homeಕರಾವಳಿಪುತ್ತೂರು: ಚಾಲಕನ ನಿದ್ರೆ ಮಂಪರಿನಿಂದಾಗಿ ನಿಯಂತ್ರಣ ತಪ್ಪಿ ಚರಂಡಿಗೆ ಉರುಳಿದ ಓಮ್ನಿ

ಪುತ್ತೂರು: ಚಾಲಕನ ನಿದ್ರೆ ಮಂಪರಿನಿಂದಾಗಿ ನಿಯಂತ್ರಣ ತಪ್ಪಿ ಚರಂಡಿಗೆ ಉರುಳಿದ ಓಮ್ನಿ

- Advertisement -
- Advertisement -

ಪುತ್ತೂರು: ಚಾಲಕನ ನಿದ್ರೆ ಮಂಪರಿನಿಂದಾಗಿ ನಿಯಂತ್ರಣ ಓಮ್ನಿ ತಪ್ಪಿ ಚರಂಡಿಗೆ ಉರುಳಿದ ಘಟನೆ ತಿಂಗಳಾಡಿ ಬಡಕೋಡಿ ರಸ್ತೆಯ ನೆಕ್ಕಿಲು ಎಂಬಲ್ಲಿ ಇಂದು (ಸೆ 19) ಬೆಳಿಗ್ಗೆ ನಡೆದಿದೆ.ಓಮ್ನಿಯಲ್ಲಿ ಚಾಲಕ ಮಾತ್ರವಿದ್ದು ಯಾವುದೇ ಅಪಾಯಗಳಿಲ್ಲದೇ ಪಾರಾಗಿದ್ದಾರೆ. ಓಮ್ನಿಯು ತಿಂಗಳಾಡಿಯಿಂದ ರೆಂಜಲಾಡಿಗೆ ತೆರಳುತ್ತಿತ್ತು ಎನ್ನಲಾಗಿದೆ.

ಅಪಘಾತವು ಬೆಳಗಿನ ಜಾವ 7.30ರ ಸುಮಾರಿಗೆ ನಡೆದಿದೆ. ರೆಂಜಲಾಡಿ ನಿವಾಸಿ ರಫೀಕ್ ಎಂಬವರು ಅಪಘಾತಕ್ಕಿಡಾದ ವಾಹನ ಚಲಾಯಿಸುತ್ತಿದ್ದರು ಎಂದು ತಿಳಿದು ಬಂದಿದೆ.

ನಿದ್ದೆ ಮಂಪರು ಆವರಿಸಿದ್ದರಿಂದ ವಾಹನ ಹತೋಟಿ ಕಳೆದುಕೊಂಡು ರಸ್ತೆಯಿಂದ 1 ಮೀಟರ್ ದೂರದಲ್ಲಿದ  ಚರಂಡಿಗೆ ಉರುಳಿದೆ. ವಾಹನ ಉರುಳಿಬಿದ್ದ ಸಮೀಪದಲ್ಲೆ ವಿದ್ಯುತ್ ಕಂಬವಿತ್ತು, ಅದಕ್ಕೆ ಢಿಕ್ಕಿ  ಹೊಡೆಯುತ್ತಿದ್ದರೇ ಭಾರಿ ಅನಾಹುತ ಸಂಭವಿಸುವ ಸಾಧ್ಯತೆಯಿತ್ತು. ಸ್ಥಳೀಯರ ನೆರವಿನಿಂದ ಕ್ರೇನ್ ಸಹಾಯದಿಂದ ಆಮ್ನಿಯನ್ನು ಮೇಲಕ್ಕೆತ್ತಲಾಯಿತು. ವಾಹನ ಸಂಪೂರ್ಣ ಜಖಂಗೊಂಡಿದೆ

- Advertisement -

Latest News

error: Content is protected !!