Sunday, June 7, 2026
Homeತಾಜಾ ಸುದ್ದಿಕೇರಳದಲ್ಲಿ ನಿಫಾ ವೈರಸ್; ಮಲಪ್ಪುರಂ ಜಿಲ್ಲೆಯಲ್ಲಿ ಮಾಸ್ಕ್ ಕಡ್ಡಾಯ; ಶಾಲೆಗಳಿಗೆ ರಜೆ ಘೋಷಣೆ!!

ಕೇರಳದಲ್ಲಿ ನಿಫಾ ವೈರಸ್; ಮಲಪ್ಪುರಂ ಜಿಲ್ಲೆಯಲ್ಲಿ ಮಾಸ್ಕ್ ಕಡ್ಡಾಯ; ಶಾಲೆಗಳಿಗೆ ರಜೆ ಘೋಷಣೆ!!

- Advertisement -
- Advertisement -

ಕೇರಳ: ಇಲ್ಲಿನ ಮಲಪ್ಪುರಂ ಜಿಲ್ಲೆಯಲ್ಲಿ ನಿಫಾ ವೈರಸ್‌ ಮತ್ತೆ ಹರಡುತ್ತಿದ್ದು, ಇದರಿಂದಾಗಿ ಜಿಲ್ಲೆಯಾದ್ಯಂತ ಮಾಸ್ಕ್ ಅನ್ನು ಕಡ್ಡಾಯಗೊಳಿಸಲಾಗಿದೆ. ಈ ಜಿಲ್ಲೆಯ ಹಲವು ಶಾಲೆಗಳಿಗೆ ರಜೆ ಘೋಷಿಸಲಾಗಿದ್ದು, ಈ ಬಗ್ಗೆ ಆರೋಗ್ಯ ಇಲಾಖೆ ಮಾರ್ಗಸೂಚಿ ಪ್ರಕಟಿಸಿದೆ.

ಕೇರಳ ಸರ್ಕಾರ ಈ ಕುರಿತಂತೆ ಅಲರ್ಟ್ ಘೋಷಿಸಿದ್ದು, ವೈರಸ್‌ನಿಂದಾಗಿ ಇಬ್ಬರು ಮೃತರಾಗಿದ್ದಾರೆ. ಸಾರ್ವಜನಿಕರಿಗೆ ಬೆಳಗ್ಗೆ 10 ಗಂಟೆಯಿಂದ 7 ಗಂಟೆ ವರೆಗೆ ಓಡಾಟಕ್ಕೆ ಅವಕಾಶ ನೀಡಲಾಗಿದ್ದು, ಸಾರ್ವಜನಿಕ ಪ್ರದೇಶಗಳಲ್ಲಿ ಜನದಟ್ಟಣೆಯನ್ನು ನಿಷೇಧಿಸಿದೆ. ಅಗತ್ಯ ವಸ್ತುಗಳ ಖರೀದಿಗೆ ಮಾತ್ರ ಅಂಗಡಿಗಳನ್ನು ಬೆಳಗ್ಗೆ 6 ಗಂಟೆಯಿಂದ ಆರಂಭಿಸಲು ಅವಕಾಶವಿದೆ ಎಂದು ತಿಳಿದು ಬಂದಿದೆ.

ಜಿಲ್ಲೆಯಾದ್ಯಂತಹ ಸೂಚನೆ: ಜಿಲ್ಲೆಯ ಸಿನಿಮಾ ಥಿಯೇಟರ್‌ಗಳನ್ನು ಮುಚ್ಚಲಾಗಿದೆ. ಮಲಪ್ಪುರಂ ಜಿಲ್ಲೆಯ ಸುತ್ತ ಮುತ್ತಲಿನ ತಾಲೂಕು ಹಾಗೂ ಗ್ರಾಮಗಳಲ್ಲಿ ಶಾಲಾ ಕಾಲೇಜು, ಇತರ ಶಿಕ್ಷಣ ಸಂಸ್ಥೆಗಳಿಗೆ ರಜೆ ಘೋಷಿಸಲಾಗಿದ್ದು, ಶಾಲಾ ಕಾಲೇಜಿನಲ್ಲಿ ಹಾಗೂ ಸಾರ್ವಜನಿಕ ಪ್ರದೇಶಗಳಲ್ಲಿ ಮಾಸ್ಕ ಕಡ್ಡಾಯ ಮಾಡಲಾಗಿದೆ. ಇನ್ನು ಪ್ರಾಣಿ ಪಕ್ಷಿಗಳು ಕಚ್ಚಿರುವ ಯಾವುದೇ ಆಹಾರ ಸೇವಿಸದಂತೆ ಸೂಚಿಸಲಾಗಿದೆ.

ವೈರಸ್ ಗೆ ಬಲಿ: ಕೇರಳದ ಮಲಪ್ಪುರಂ ಜಿಲ್ಲೆಯ ನೀಲಂಬೂರು ತಾಲೂಕಿನ ವಾಂಡೂರ್‌ನವನಾದ 23 ವರ್ಷದ ವಿದ್ಯಾರ್ಥಿ ಯೊಬ್ಬನಿಗೆ ಜಾಂಡೀಸ್ ರೀತಿಯ ಲಕ್ಷಣಗಳು ಕಾಣಿಸಿಕೊಂಡಿದ್ದು, ಈ ಹಿನ್ನೆಲೆಯಲ್ಲಿ ಬೆಂಗಳೂರಿನಿಂದ ಊರಿಗೆ ಬಂದಿದ್ದ. ಈತ ಒಂದು ವಾರ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದು, ಚಿಕಿತ್ಸೆ ಫಲಕರಿಯಾಗದೆ ವಿದ್ಯಾರ್ಥಿ ಸೆ.9ರಂದು ಕೊನೆಯುಸಿರೆಳೆದಿದ್ದಾನೆ. ಇನ್ನು ಈತ ಮಾದರಿಗಳನ್ನು ಕೊಝಿಕ್ಕೋಡ್‌ನಲ್ಲಿ ಪರೀಕ್ಷೆಗೆ ಒಳಪಡಿಸಿದಾಗ ನಿಫಾ ವೈರಾಣು ಸೋಂಕಿನ ಲಕ್ಷಣ ಕಂಡುಬಂದಿತ್ತು. ಹೀಗಾಗಿ ಉನ್ನತ ಪರಿಶೀಲನೆಗಾಗಿ ಆ ಮಾದರಿಯನ್ನು ಪುಣೆಯ ವೈರಾಣು ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಈ ವೇಳೆ ನಿಫಾ ವೈರಸ್ ದೃಢಪಟ್ಟಿತ್ತು ಎನ್ನಲಾಗಿದೆ. ಇದು ನಿಫಾ ವೈರಸ್‌ಗೆ ಬಲಿಯಾದ 2ನೇ ಪ್ರಕರಣವಾಗಿದೆ ಎನ್ನಲಾಗಿದೆ.

- Advertisement -

Latest News

error: Content is protected !!