Thursday, June 4, 2026
Homeತಾಜಾ ಸುದ್ದಿನಟ ದರ್ಶನ್ ಸೆಲ್ ಗೆ ಬಂತು ಟಿವಿ; ಕೆಲವು ಸರ್ಕಾರಿ ಚಾನೆಲ್ ಗಳ ವೀಕ್ಷಣೆಗೆ ಮಾತ್ರ...

ನಟ ದರ್ಶನ್ ಸೆಲ್ ಗೆ ಬಂತು ಟಿವಿ; ಕೆಲವು ಸರ್ಕಾರಿ ಚಾನೆಲ್ ಗಳ ವೀಕ್ಷಣೆಗೆ ಮಾತ್ರ ಅವಕಾಶ

- Advertisement -
- Advertisement -

ಬಳ್ಳಾರಿ: ಕೇಂದ್ರ ಕಾರಾಗೃಹದ ವಿಶೇಷ ಭದ್ರತಾ ಸೆಲ್ ನಲ್ಲಿರುವ  ನಟ ದರ್ಶನ್ ತಮ್ಮ ಸೆಲ್ ಗೆ ಟಿವಿ ಬೇಕು ಎಂದು ಅಧಿಕಾರಿಗಳಿಗೆ ಮನವಿ ಮಾಡಿದ್ದರು. ಇದೀಗ ಅವರ ಮನವಿಗೆ ಫಲ ಸಿಕ್ಕಿದೆ.

ಹೌದು.. ದರ್ಶನ್ ಅವರ ಕೊಠಡಿಗೆ ಜೈಲು ಅಧಿಕಾರಿಗಳು ಟಿವಿಯನ್ನು ಅಳವಡಿಸಿದ್ದು, ಕೇವಲ ಸರ್ಕಾರಿ ಚಾನಲ್ ಗಳನ್ನು ವೀಕ್ಷಿಸಲು ಮಾತ್ರವೇ ಅವಕಾಶ ನೀಡಲಾಗಿದೆ.

ದರ್ಶನ್ ಅವರು ತಮ್ಮ ಸೆಲ್ ನಲ್ಲಿ ಟಿವಿ ಅಳವಡಿಸುವಂತೆ ಜೈಲು ಅಧಿಕಾರಿಗಳನ್ನು ಕೋರಿದ್ದರು. ತಮ್ಮ ಬಗೆಗಿನ ಪ್ರಕರಣದ ಮಾಹಿತಿ ತಿಳಿಯಬೇಕಿದೆ. ಟಿವಿ ಅಳವಡಿಸುವಂತೆ ಅಗ್ರಹಿಸಿದ್ದರು. ಈ ಹಿನ್ನಲೆಯಲ್ಲಿ ಈಗ ನಟ ದರ್ಶನ್ ಸೆಲ್ ಗೆ ಟಿವಿ ಅಳವಡಿಸಲಾಗಿದೆ. ಆದರೇ ಖಾಸಗಿ ಚಾನಲ್ ವೀಕ್ಷಣೆಯ ಸೌಲಭ್ಯ ಒದಗಿಸಿಲ್ಲ. ಕೇವಲ ಡಿಡಿ ಚಂದನ ಸೇರಿದಂತೆ ಇತರೆ ಸರ್ಕಾರಿ ಚಾನಲ್ ವೀಕ್ಷಿಸಲು ಅವಕಾಶ ನೀಡಲಾಗಿದೆ.

- Advertisement -

Latest News

error: Content is protected !!