Sunday, June 7, 2026
Homeಅಪರಾಧನಾಯಿಯನ್ನು ಜೀವಂತವಾಗಿ ತ್ಯಾಜ್ಯ ವಿಲೇವಾರಿ ವಾಹನಕ್ಕೆ ತುಂಬಿಸಿ ಸಾಗಿಸಿದ ಪ್ರಕರಣ: ಚಾಲಕನಿಗೆ ಪಾಲಿಕೆಯಿಂದ ಎಚ್ಚರಿಕೆ

ನಾಯಿಯನ್ನು ಜೀವಂತವಾಗಿ ತ್ಯಾಜ್ಯ ವಿಲೇವಾರಿ ವಾಹನಕ್ಕೆ ತುಂಬಿಸಿ ಸಾಗಿಸಿದ ಪ್ರಕರಣ: ಚಾಲಕನಿಗೆ ಪಾಲಿಕೆಯಿಂದ ಎಚ್ಚರಿಕೆ

- Advertisement -
- Advertisement -

ಮಂಗಳೂರು: ತ್ಯಾಜ್ಯ ವಿಲೇವಾರಿ ಮಾಡುವ ವಾಹನಕ್ಕೆ ಸಾಕು ನಾಯಿಯೊಂದನ್ನು ಜೀವಂತವಾಗಿಯೇ ತುಂಬಿಸಿ ಸಾಗಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವಾಹನದ ಚಾಲಕನಿಗೆ ಪಾಲಿಕೆಯಿಂದ ಎಚ್ಚರಿಕೆ ನೀಡಲಾಗಿದೆ.

ಮೇಯರ್‌ ಸುಧೀರ್‌ ಶೆಟ್ಟಿ ಕಣ್ಣೂರು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿ, ‘ಡೊಂಗರಕೇರಿಯ ಮನೆಯೊಂದರ ನಾಯಿಯನ್ನು ಮನೆಯವರೇ ತೊಂದರೆ ನೀಡುತ್ತಿದೆ ಎಂದು ಅದನ್ನು ತ್ಯಾಜ್ಯ ವಿಲೇ ಮಾಡುವ ವಾಹನಕ್ಕೆ ತುಂಬಿಸುತ್ತಿದ್ದ ವಿಡಿಯೋ ಬಹಿರಂಗವಾಗಿ ಪ್ರಾಣಿ ಪ್ರಿಯರಿಂದ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು.

ಈ ಪ್ರಕರಣದ ಕುರಿತು ಪಾಲಿಕೆಯ ಗಮನಕ್ಕೆ ಬಂದಿದ್ದು, ಅದರಂತೆ ವಾಹನದ ಚಾಲಕರನ್ನು ಕರೆದು ಮುಂದೆ ಇಂತಹ ಘಟನೆ ನಡೆಯದಂತೆ ಎಚ್ಚರಿಕೆ ನೀಡಲಾಗಿದೆ ಎಂದಿದ್ದಾರೆ.

“ಮನೆಯ ಸಾಕು ನಾಯಿ ಸುತ್ತಮುತ್ತಲಿನ ಮನೆಯವರಿಗೆ ತೊಂದರೆ ಕೊಡುತ್ತಿದ್ದು, ಆ ಮನೆಯ ಮಾಲಕರು ವಿದೇಶ ದಲ್ಲಿದ್ದು, ಮನೆಯಲ್ಲಿ ವಾಸವಿದ್ದವರು ತ್ಯಾಜ್ಯ ಸಾಗಾಟದ ವಾಹನದವರಿಗೆ ಕರೆ ಮಾಡಿ ನಾಯಿಯನ್ನು ಬೇರೆಡೆ ಸಾಗಿಸುವಂತೆ ತಿಳಿಸಿದ್ದಾರೆ. ಅದರಂತೆಯೇ ಪಾಲಿಕೆಯವರು ನಾಯಿಯನ್ನು ಸಾಗಾಟ ಮಾಡಿದ್ದಾರೆ. ಪಾಲಿಕೆಯ ಚಾಲಕನಿಗೂ ಇದು ಮೊದಲ ಅನುಭವ ಆಗಿದ್ದು, ಮುಂದೆ ಇಂತಹ ಕೃತ್ಯ ನಡೆಸದಂತೆ ಆತನ ಸಹಿತ ಪಾಲಿಕೆಯ ಎಲ್ಲ ವಾಹನದ ಚಾಲಕರಿಗೆ ಸೂಚನೆ ನೀಡಲಾಗಿದೆ’ ಎಂದು ಮೇಯರ್‌ ಸುದ್ದಿಗಾರರಿಗೆ ತಿಳಿಸಿದ್ದಾರೆ.

- Advertisement -

Latest News

error: Content is protected !!