Thursday, June 4, 2026
Homeಕರಾವಳಿಉಡುಪಿಕೆಜಿಎಫ್ 2 ಗಾಯಕಿ ಸುಚೇತ ಬಸ್ರೂರು ಜೊತೆ ಎಂಗೇಜ್ ಆದ್ರು ಸಿಂಗಾರ ಸಿರಿಯೇ ಖ್ಯಾತಿಯ ಪ್ರಮೋದ್...

ಕೆಜಿಎಫ್ 2 ಗಾಯಕಿ ಸುಚೇತ ಬಸ್ರೂರು ಜೊತೆ ಎಂಗೇಜ್ ಆದ್ರು ಸಿಂಗಾರ ಸಿರಿಯೇ ಖ್ಯಾತಿಯ ಪ್ರಮೋದ್ ಮರವಂತೆ

- Advertisement -
- Advertisement -

ಉಡುಪಿ; ಕಾಂತಾರ ಸಿನಿಮಾ ಖ್ಯಾತಿಯ ಚಿತ್ರ ಸಾಹಿತಿ ಪ್ರಮೋದ್ ಮರವಂತೆ ಚಿತ್ರ ಪ್ರೇಮಿಗಳಿಗೆ ಸಿಹಿಯೊಂದನ್ನು ಕೊಟ್ಟಿದ್ದಾರೆ. ‘ಕೆಜಿಎಫ್ 2’ ಚಿತ್ರದ ಸಿಂಗರ್ ಸುಚೇತ ಬಸ್ರೂರು ಜೊತೆ ಎಂಗೇಜ್ ಮೆಂಟ್ ಮಾಡಿಕೊಂಡಿದ್ದಾರೆ.
ನಿಶ್ಚಿತಾರ್ಥದ ಸಂಭ್ರಮದ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿ, ‘ರಾಗಕ್ಕೆ ಪದ ಸೇರಿದೆ ಬದುಕೊಂದು ಹಾಡಾಗಿದೆ’ ಎಂದು ಸಾಲುಗಳನ್ನು ಬರೆದು ಭಾವಿ ಪತ್ನಿ ಜೊತೆಗಿನ ಫೋಟೋ ಹಂಚಿಕೊಂಡಿದ್ದಾರೆ.

ಪ್ರಮೋದ್ ಭಾವಿ ಪತ್ನಿಯ ಹೆಸರು ಸುಚೇತ ಬಸ್ರೂರು, ಕೆಜಿಎಫ್ 2 ಚಿತ್ರದಲ್ಲಿ ‘ಗಗನ ನೀ ಭುವನ ನೀ’ ಎಂಬ ಹಾಡನ್ನು ಸೊಗಸಾಗಿ ಹಾಡುವ ಮೂಲಕ ಸದ್ದು ಮಾಡಿದ್ದರು. ಇವರು ಖ್ಯಾತ ಸಂಗೀತ ನಿರ್ದೇಶಕ ರವಿ ಬಸ್ರೂರು ಅವರ ಸೊಸೆಯಾಗಿದ್ದಾರೆ. ಅವರ ಅಕ್ಕನ ಮಗಳು ಸುಚೇತ ಜೊತೆ ಪ್ರಮೋದ್ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಸದ್ಯದಲ್ಲೇ ಮದುವೆ ಬಗ್ಗೆ ಅಪ್ ಡೇಟ್ ಕೊಡಲಿದ್ದಾರೆ.

- Advertisement -

Latest News

error: Content is protected !!